ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಮೂಲಭೂತವಾಗಿ ರಾಷ್ಟ್ರ ವಿರೋಧಿ ಎಂದು ಕರೆದಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಈ ಕಾಯ್ದೆ ನಿರ್ದಿಷ್ಟ ಸಮುದಾಯವೊಂದನ್ನು ಗುರಿಯನ್ನಾಗಿಟ್ಟುಕೊಂಡಿದೆ ಎಂದು ಶುಕ್ರವಾರ ಆರೋಪಿಸಿದ್ದಾರೆ.
ಎಎನ್ ಐ ಸುದ್ದಿಸಂಸ್ಥೆ ಜೊತೆಗೆ ಮಾತನಾಡಿದ ಅವರು, ಸಿಎಎ ವಿಚಾರ ಬಂದಾಗ ಸಂಸತ್ತಿನಲ್ಲಿ ಮಾತನಾಡಿದ್ದೇನೆ. ಗೃಹ ಸಚಿವರನ್ನು ಆಕ್ಷೇಪಿಸಿದ್ದೇನೆ. ಯಾವುದೇ ಕಾನೂನು ನಿರ್ದಿಷ್ಟ ಸಮುದಾಯವನ್ನು ಗುರಿಯನ್ನಾಗಿ ಮಾಡಿಕೊಂಡರೆ ಅದು ಮೂಲಭೂತವಾಗಿ ರಾಷ್ಟ್ರ ವಿರೋಧಿಯಾಗಲಿದೆ. ಕೇಂದ್ರ ಸರ್ಕಾರ ಇದರ ಪ್ರಕ್ರಿಯೆ ಮಾಡಬಾರದು,. ಎರಡು ವರ್ಷದಿಂದ ಈ ಕಾನೂನು ಜಾರಿಗೊಳಿಸದಿರುವುದನ್ನು ಸ್ವಾಗತಿಸುವುದಾಗಿ ಹೇಳಿದರು.
ಯಾವುದನ್ನು ದಡ್ಡತನದಿಂದ ಮಾಡುವ ಮುನ್ನ ಯೋಚಿಸುತ್ತಾರೆ ಎಂಬ ವಿಶ್ವಾಸವಿದೆ. ಸಿಎಎ ದೇಶವನ್ನು ವಿಭಜಿಸಲಿದೆ. ದೇಶದ ಸೌಹಾರ್ದತೆಗೆ ಭಂಗ ತರುವಂತಹ ಯಾವುದೇ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ಒತ್ತಾಯಿಸುವುದಾಗಿ ಅವರು ತಿಳಿಸಿದರು.