ಕಣ್ಣೂರು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬೆಂಗಾವಲು ವಾಹನಗಳು ನಿನ್ನೆ ಅಪಘಾತಕ್ಕೀಡಾಗಿದೆ. ಪಯ್ಯನೂರು ಪೆರುಂಬ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಸಿಎಂ ಪ್ರಯಾಣಿಸುತ್ತಿದ್ದ ವಾಹನ ಹಾದು ಹೋದ ಬಳಿಕ ಈ ಅವಘಡ ಸಂಭವಿಸಿದೆ. ಮೂರು ಬೆಂಗಾವಲು ವಾಹನಗಳು ಡಿಕ್ಕಿ ಹೊಡೆದವು.
ಪೋಲೀಸರು ಅಪಘಾತವನ್ನು ಗಂಭೀರ ಭದ್ರತಾ ಲೋಪವೆಂದು ಪರಿಗಣಿಸಿದ್ದಾರೆ. ಕಾಸರಗೋಡಿನಲ್ಲಿ ನಡೆದ ಸಿಪಿಎಂ ಕಾರ್ಯಕ್ರಮದ ಬಳಿಕ ಈ ದುರ್ಘಟನೆ ನಡೆದಿದೆ. ಮುಖ್ಯಮಂತ್ರಿ ಮತ್ತು ಕೊಡಿಯೇರಿ ಬಾಲಕೃಷ್ಣನ್ ಪ್ರಯಾಣಿಸುತ್ತಿದ್ದ ಬೆಂಗಾವಲು ವಾಹನಗಳು ಅಪಘಾತಕ್ಕೀಡಾಗಿವೆ.
ಶನಿವಾರ ಮುಖ್ಯಮಂತ್ರಿಗಳ ಪೈಲಟ್ ವಾಹನ ಅಪಘಾತದಲ್ಲಿ ನಾಲ್ವರು ಪೋಲೀಸರು ಗಾಯಗೊಂಡಿದ್ದರು. ತೃಕ್ಕಾಕರ ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿಟಿ ಥಾಮಸ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.