ನವದೆಹಲಿ: ತಾವು ಸೇವಿಸುತ್ತಿರುವ ಆಹಾರ ಯಾವುದು ಎಂದು ತಿಳಿಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ಹೇಳಿರುವ ದೆಹಲಿ ಹೈ ಕೋರ್ಟ್, ಆಹಾರ ತಯಾರಿಕೆಯಲ್ಲಿ ಏನೇನು ಅಂಶಗಳನ್ನು ಬಳಸಲಾಗಿದೆ ಎನ್ನುವುದುನ್ನು ಬಹಿರಂಗ ಪಡಿಸುವಂತೆ ಆಹಾರ ಉತ್ಪಾದನಾ ಕಂಪನಿಗಳಿಗೆ ಆದೇಶಿಸಿದೆ.

ಆಹಾರದ ಅಂಶಗಳ ಸಂಕೇತ ನಾಮ ಸೂಚಿಸಿದರೆ ಸಾಕಾಗುವುದಿಲ್ಲ. ಅವುಗಳು ಸಸ್ಯ ಜನ್ಯವೋ ಪ್ರಾಣಿ ಜನ್ಯವೋ ಎನ್ನುವುದನ್ನೂ ಸ್ಪಷ್ಟಪಡಿಸಬೇಕೆಂದು ಕೋರ್ಟ್ ಹೇಳಿದೆ. ಅಥವಾ ಅವುಗಳನ್ನ ಪ್ರಯೋಗಾಲಯದಲ್ಲಿ ಉತ್ಪಾದಿಸಿದ್ದೇ ಎನ್ನುವುದನ್ನು ಕೂಡ ನಮೂದಿಸಬೇಕು ಎಂದು ಸೂಚಿಸಿದೆ. ಇವುಗಳನ್ನು ಪ್ರದರ್ಶಿಸಲು ವಿಫಲವಾಗುವ ಆಹಾರ ತಯಾರಿಕಾ ಕಂಪನಿಗಳನ್ನು ಆಹಾರ ಸೇವಿಸುವ ಸಾರ್ವಜನಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಗಾಗಿ ಶಿಕ್ಷಿಸಲಾಗುತ್ತದೆ. ನಷ್ಟಕ್ಕೆ ದಂಡವನ್ನೂ ವಿಧಿಸಲಾಗುತ್ತದೆ ಎಂದು ಪೀಠ ಎಚ್ಚರಿಸಿದೆ.
ಭಾರತೀಯ ಆಹಾರ ಸುರಕ್ಷತೆ ಮಾನಕಗಳ ಪ್ರಾಧಿಕಾರ (ಎಫ್ಎಸ್ಎಸ್ಎಐ), ಆಹಾರ ತಯಾರಕರು ಮಾಡುವ ಘೋಷಣೆಯನ್ನು ಪರಿಶೀಲಿಸಬೇಕು. ಒಂದು ವೇಳೆ ಪ್ರಾಧಿಕಾರದ ಅಧಿಕಾರಿಗಳು ಆಹಾರೋದ್ಯಮಿಗಳೊಂದಿಗೆ ಶಾಮೀಲಾಗಿ ತಮ್ಮ ಕರ್ತವ್ಯದಲ್ಲಿ ವಿಫಲರಾದರೆ ಅಂಥ ಅಧಿಕಾರಿಗಳು ಕೂಡ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಸಿದೆ. ರಾಮ ಗೋ ರಕ್ಷಾ ದಳ ಸಂಘಟನೆ ಅರ್ಜಿ ಸಲ್ಲಿಸಿತ್ತು.