ಕಾಸರಗೋಡು: ಕಾಸರಗೋಡು ಸರ್ಕಾರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಸಪ್ತದಿನ ಶಿಬಿರ ಕಾಸರಗೋಡು ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್ ಉದ್ಘಾಟಿಸಿದರು. ಎನ್‍ಎಸ್‍ಎಸ್ ಸ್ವಯಂಸೇವಕರ ಸಾಮಾಜಿಕ ಪ್ರಜ್ಞೆ ಮತ್ತು ಬದ್ಧತೆಯನ್ನು ಮುಂದಿನ ಜೀವನಕ್ಕಾಗಿ ಏಳು ದಿನಗಳ ಶಿಬಿರವನ್ನು ಮೀರಿ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾಲೇಜು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕಾಲೇಜು ಪ್ರಾಂಶುಪಾಲೆ ಡಾ.ಎಂ.ರೇಮಾ ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ವಿಶ್ವವಿದ್ಯಾಲಯದ ಡಿಡಿಎಸ್ ಡಾ. ಟಿ.ಪಿ.ನಫೀಸತ್ ಬೇಬಿ ಮುಖ್ಯ ಭಾಷಣ ಮಾಡಿದರು. ಸೆನೆಟ್ ಸದಸ್ಯ ಡಾ. ವಿಜಯನ್, ಉಪ ಪ್ರಾಂಶುಪಾಲ ಡಾ ಕೆ.ಕೆ.ಹರಿ ಕುರುಪ್, ವಾರ್ಡ್ ಕೌನ್ಸಿಲರ್ ಸವಿತಾ, ಹಳೆ ವಿದ್ಯಾರ್ಥಿಗಳ ಪ್ರತಿನಿಧಿ ಪಿ.ವಿ.ಮಹದೇವನ್ ನಾಯರ್, ತಾ.ಪಂ ಉಪಾಧ್ಯಕ್ಷ ಅರ್ಜುನನ್ ತಾಯಲಂಗಾಡಿ, ತಾ.ಪಂ ಕಾರ್ಯದರ್ಶಿ ಪಿ. ಪ್ರಶಾಂತ್ ಕುಮಾರ್, ಐಕ್ಯೂಎಸಿ ಕೋ-ಆರ್ಡಿನೇಟರ್ ಡಾ.ಪಿ.ಯು.ಜಿಜೋ, ನೆಹರೂ ಯುವಕೇಂದ್ರದ ಜಿಲ್ಲಾ ಸಂಯೋಜಕ ಪಿ.ಅಖಿಲ್, ಅತ್ಯುತ್ತಮ ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಡಾ.ಎಂ.ರತ್ನಾಕರ, ಅತ್ಯುತ್ತಮ ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ರಾಜ್ಯ ಪ್ರಶಸ್ತಿ ವಿಜೇತ ಡಾ ಟಿ. ವಿನಯನ್, ಎನ್ ಸಿಸಿ ಸಂಯೋಜಕ ಪ್ರೊ.ಕೆ. ಲಕ್ಷ್ಮಿ, ಕಾಲೇಜು ಅಧೀಕ್ಷಕ ಎ. ರವೀಂದ್ರನಾಥ ರೈ ಮತ್ತಿತರರು ಮಾತನಾಡಿದರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಪ್ರೊ.ಆಸಿಫ್ ಇಕ್ಬಾಲ್ ಕಕ್ಕಶ್ಸೆರಿ ಸ್ವಾಗತಿಸಿ, ಕಾರ್ಯಕ್ರಮಾಧಿಕಾರಿ ಪ್ರೊ.ಎಸ್.ಸುಜಾತಾ ವಂದಿಸಿದರು.
ಡಿ.29ರಂದು ಶಿಬಿರ ಮುಕ್ತಾಯವಾಗಲಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸುವರು. ಶಿಬಿರದಲ್ಲಿ ವರದಕ್ಷಿಣೆ ವಿರುದ್ಧ ರ್ಯಾಲಿಗಳು, ಸಾಮಾಜಿಕ ಸಮಸ್ಯೆಗಳ ಕುರಿತು ಬೀದಿ ನಾಟಕ, ವಿವಿಧ ವರ್ಗಗಳು ಮತ್ತು ಗ್ರಾಮೀಣ ಹಾಡುಗಳನ್ನು ಬರೆದ ಉದಯನ್ ಕುಂಡಂಕುಳಿ ನೇತೃತ್ವದಲ್ಲಿ ಜಾನಪದ ಗೀತೆಗಳ ಗಾಯನ ನಡೆಯಲಿವೆ.