ಹಬ್ಬಗಳು, ಬರ್ತ್‌ಡೇ ಪಾರ್ಟಿಗಳು, ಮದುವೆ ಸಮಾರಂಭಗಳು, ನ್ಯೂ ಇಯರ್ ಪಾರ್ಟಿಗಳಿಗೆ ಹೋದಾಗ ನಾನು ಡಯಟ್ ಮಾಡುತ್ತಿದ್ದೇನೆ, ನನಗೆ ಅದು ಬೇಡ- ಇದು ಬೇಡ ಎಂದು ಎಂದು ಕೂತರೆ ನೀವು ಸೆಲೆಬ್ರೇಷನ್ ಮೂಡ್ ಕಳೆದುಕೊಳ್ಳುತ್ತೀರಿ.
ಇಂಥ ಸ್ಪೆಷಲ್ ದಿನಗಳಲ್ಲಿ ಡಯಟ್, ತೂಕ ಇಳಿಕೆ ಇದರ ಬಗ್ಗೆ ಏನೂ ಯೋಚಿಸಬೇಡಿ, ನಿಮ್ಮ ಇಷ್ಟಭಕ್ಷ್ಯವನ್ನು ಸವಿಯಿರಿ. ಅದಾದ ಬಳಿಕ ಡಿಟಾಕ್ಸ್ ಮಾಡಿದರೆ ಅಯ್ತು ನಿಮ್ಮ ದೇಹ ತೂಕ ಹೆಚ್ಚುವುದಿಲ್ಲ, ಮನಸ್ಸು-ದೇಹ ಉಲ್ಲಾಸವಾಗಿರುತ್ತದೆ. ದೇಹವನ್ನು ಡಿಟಾಕ್ಸ್ ಮಾಡಲು ಈ ಆಹಾರಗಳನ್ನು ಸೇವಿಸಿ.ಬ್ಲೂ ಬೆರ್ರಿಯೊಂದಿಗೆ ಚಿಯಾ ಪುಡ್ಡಿಂಗ್ 2 ಕಪ್ ಬ್ಲೂ ಬೆರ್ರಿ 1 ಕಪ್ ಚಿಯಾ ಬೀಜಗಳು 4 ಕಪ್ ಬಾದಾಮಿ ಹಾಲು 1 ಚಮಚ ವೆನಿಲ್ಲಾ ರಸ 1 ಚಮಚ ಚಕ್ಕೆ 2 ಚಮಚ ಜೇನು ಬ್ಲೂ ಬೆರ್ರಿಯನ್ನು ಬಾದಾಮಿ ಹಾಲಿನ ಜೊತೆ ಹಾಕಿ ಬ್ಲೆಂಡ್ ಮಾಡಿ, ಅದಕ್ಕೆ ಚಿಯಾ ಬೀಜಗಳು, ಚಕ್ಕೆ, ವೆನಿಲ್ಲಾ ರಸ ಹಾಕಿ ಮಿಕ್ಸ್ ಮಾಡಿ 15 ಇಟ್ಟು ನಂತರ ಮತ್ತೊಮ್ಮೆ ಮಿಕ್ಸ್ ಮಾಡಿ ಫ್ರಿಡ್ಜ್‌ನಲ್ಲಿ ಒಂದು ರಾತ್ರಿ ಇಟ್ಟು ಅದಬ್ಬು ಬ್ಲೂ ಬೆರ್ರಿ ಜೊತೆ ಸರ್ವ್ ಮಾಡಿ.
ಗ್ರೀನ್ ಡಿಟಾಕ್ಸ್ ಜ್ಯೂಸ್ 11/4 ಕಪ್ ಪಾಲಾಕ್ 11/4 ಕಪ್ ಬೆರ್ರಿ ಹಣ್ಣು 2 ಮೀಡಿಯಂ ಸೆಲರಿ ಚಿಟಿಕೆಯಷ್ಟು ಉಪ್ಪು 1 ಕಪ್ ಕಿತ್ತಳೆ ಜ್ಯೂಸ್ ಸ್ವಲ್ಪ ಪುದೀನಾ ಇವುಗಳನ್ನು ಗ್ರೈಂಡ್ ಮಾಡಿ ಕುಡಿಯಿರಿ.
3-4 ಟೊಮೆಟೊ 2 ಈರುಳ್ಳಿ 4-5 ಎಸಳು ಬೆಳ್ಳುಳ್ಳಿ ರುಚಿಗೆ ತಕ್ಕ ಉಪ್ಪು ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ 2 ಚಮಚ ಆಲೀವ್ ಎಣ್ಣೆ ಪ್ಯಾನ್‌ಗೆ ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ಬೆಳ್ಳುಳ್ಳಿ ಹಾಗೂ ಇರುಳ್ಳಿ ಹಾಕಿ ಸ್ವಲ್ಪ ಬಿಸಿ ಮಾಡಿ ಗ್ಯಾಸ್ ಆಫ್ ಮಾಡಿ. ನಂತರ ಟೊಮೆಟೊ ಕತ್ತರಿಸಿ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ, ಕಾಳು ಮೆಣಸಿನ ಪುಡಿ ಉದುರಿಸಿ, ಆಲೀವ್ ಆಯಿಲ್ ಸೇರಿಸಿ ಮಿಕ್ಸ್ ಮಾಡಿ ಸವಿಯಿರಿ.
ಬ್ರೊಕೋಲಿ ಸೂಪ್ 1 ಬ್ರೊಕೋಲಿ 2 ಸೆಲರಿ 1/2 ಚಮಚ ವೈಟ್ ಪೆಪ್ಪರ್ ಪೌಡರ್ 8 ಕಪ್ ನೀರು 2 ಚಮಚ ಬಾದಾಮಿ ರುಚಿಗೆ ತಕ್ಕ ಉಪ್ಪು 2 ಈರುಳ್ಳಿ 8 ಎಸಳು ಬೆಳ್ಳುಳ್ಳಿ 2 ಕಪ್ ಮಂದವಾದ ಹಾಲು ಮಾಡುವ ವಿಧಾನ * ಪ್ಯಾನ್ ಬಿಸಿ ಮಾಡಿ ಅದರಲ್ಲಿ ಬಾದಾಮಿ ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿ, ನಂತರ ಅದನ್ನು ತೆಗೆದು ಚಿಕ್ಕದಾಗಿ ಕತ್ತರಿಸಿ. * ಈಗ ಪ್ಯಾನ್‌ಗೆ ನೀರು ಹಾಕಿ ಕುದಿಸಿ, ಅದಕ್ಕೆ ಕತ್ತರಿಸಿಟ್ಟ ತರಕಾರಿಗಳನ್ನು ಹಾಕಿ. ತರಕಾರಿ ಬೆಂದ ಮೇಲೆ ಅದನ್ನು ಒಂದು ಪಾತ್ರೆಗೆ ಹಾಕಿ ಮ್ಯಾಶ್ ಮಾಡಿ. ಈಗ ಹಾಲು ಹಾಕಿ ಮಿಕ್ಸ್ ಮಾಡಿ ಮತ್ತೆ ಕುದಿಸಿ. ರೆಡಿಯಾದಾಗ ಕತ್ತರಿಸಿಟ್ಟ ಬಾದಾಮಿ, ವೈಟ್ ಪೆಪ್ಪರ್ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಸರ್ವ್ ಮಾಡಿ.
ಓಟ್ ಮೀಲ್ ಬೇಕಾಗುವ ಸಾಮಗ್ರಿ 1 ಕಪ್ ಓಟ್ಸ್ 2 ಚಮಚ ಬ್ಲೂ ಬೆರ್ರಿ ರುಚಿಗೆ ತಕ್ಕ ಉಪ್ಪು 2 ಚಮಚ ಕ್ರ್ಯಾನ್ ಬೆರ್ರಿ (ಒಣಗಿದ್ದು) 2 ಚಮಚ ವಾಲ್ನಟ್ ಮಾಡುವ ಸಾಮಗ್ರಿ ಈ ಎಲ್ಲಾ ಸಾಮಗ್ರಿ ಪಾತ್ರೆಯಲ್ಲಿ ಹಾಕಿ ಸ್ವಲ್ಪ ನೀರು ಸೇರಿಸಿ ಓಟ್ಸ್ ಬೆಂದು ಕ್ರೀಮ್ ರೀತಿ ಆಗುವಷ್ಟು ಬೇಯಿಸಿ ನಂತರ ಬಿಸಿ-ಬಿಸಿಯಾಗಿ ಸರ್ವ್ ಮಾಡಿ.