ತಿರುವನಂತಪುರ: ಕೇರಳದಲ್ಲಿ ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿವೆ. ನಾಲ್ಕು ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ರೋಗ ಪತ್ತೆಯಾದವರಲ್ಲಿ ಇಬ್ಬರು 17 ವರ್ಷ ವಯಸ್ಸಿನವರಾಗಿದ್ದು ಸಂಪರ್ಕ ಪಟ್ಟಿಯಲ್ಲಿದ್ದವರು. ಇದಲ್ಲದೆ, ಯುಕೆಯಿಂದ ಆಗಮಿಸಿದ ಯುವತಿ ಮತ್ತು ನೈಜೀರಿಯಾದಿಂದ ಆಗಮಿಸಿದ ಯುವಕನಿಗೆ ರೋಗ ಪತ್ತೆಯಾಗಿದೆ.
ಓಮಿಕ್ರಾನ್ 17 ವರ್ಷದ ಪುತ್ರ ಹಾಗೂ ತಾಯಿಗೆ ದೃಢಪಟ್ಟಿದೆ. 17 ವರ್ಷದ ಬಾಲಕನಿಗೆ ಕಾಯಿಲೆ ಇರುವುದು ಪತ್ತೆಯಾದ ನಂತರ ಇಬ್ಬರಿಗೂ ಕೊರೋನಾ ಪಾಸಿಟಿವ್ ಆಗಿದೆ. ಅವರ ಮೇಲೆ ನಡೆಸಿದ ಆನುವಂಶಿಕ ಪರೀಕ್ಷೆಯ ಫಲಿತಾಂಶಗಳಲ್ಲಿ ಒಮಿಕ್ರಾನ್-3 ವೈರಸ್ ಕಂಡುಬಂದಿದೆ.
ಮತ್ತೊಂದು ದೃಢಪಡಿಸಿದ ಪ್ರಕರಣವು ಯುಕೆಯಿಂದ ಆಗಮಿಸಿದ 27 ವರ್ಷದ ಮಹಿಳೆ. ಅವರು ತಿರುವನಂತಪುರದವರು. ಈ ತಿಂಗಳ 16 ರಂದು ಅವರಿಗೆ ಕೊರೋನಾ ದೃಢಪಟ್ಟಿತ್ತು. ತದನಂತರ ನಿರೀಕ್ಷಣೆಯಲ್ಲಿದ್ದರು. ಈ ಮೊದಲು, ಈ ಮಹಿಳೆ ಓಮಿಕ್ರಾನ್ ದೃಢಪಡಿಸಿದ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಪಟ್ಟಿಯಲ್ಲಿ ಸೇರಿಸಲಾಗಿತ್ತು. ನೈಜೀರಿಯಾದಿಂದ ಆಗಮಿಸಿದ ಯುವಕನಿಗೆ ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಮಾಡುವಾಗ ಕೊರೋನಾ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನೂ ನಿಗಾ ಇರಿಸಲಾಗಿತ್ತು.