ಕಾಸರಗೋಡು: ಮಹಾರಾಷ್ಟ್ರದ ಪಾಲ್ಗಾರ್ ನಲ್ಲಿ ನ. 25 ಮತ್ತು 26ರಂದು ನಡೆದ ರಾಷ್ಟ್ರೀಯ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ವಿಜೇತರಾದ ಕೇರಳ ತಂಡದ ಸದಸ್ಯರಾದ ಮಕ್ಕಳಿಗೆ ಕಾಸರಗೋಡು ರೈಲು ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಕೇರಳ ತಂಡದ ಪರವಾಗಿ ಚಿನ್ನದ ಪದಕ ಗಳಿಸಿದ ಕುಂಡಂಕುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಕೋಡೋತ್ ನ ಡಾ.ಅಂಬೇಡ್ಕರ್ ಹೈಯರ್ ಸೆಕೆಂಡರಿ ಶಾಲೆ ಹಾಗೂ ಪರವನಡ್ಕ ಜಿಎಂಆರ್‍ಎಚ್‍ಎಸ್‍ನ 14 ಕ್ರೀಡಾಪಟುಗಳಿಗೆ ಪಿಟಿಎ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಪೆÇೀಷಕರು ಸ್ವಾಗತ ಕೋರಿದರು.
ಕುಂಡಂಕುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪಿಟಿಎ ಅಧ್ಯಕ್ಷ ಸುರೇಶ್ ಪಾಯಂ, ಉಪಾಧ್ಯಕ್ಷ ಎಂ ಮಾಧವನ್, ಎಸ್‍ಎಂಸಿ ಅಧ್ಯಕ್ಷ ಎಂ.ರಘುನಾಥ್, ಬಿ.ಎನ್.ಸುರೇಶ್, ಕ್ರೀಡಾ ಬೋಧಕರು ಹಾಗೂ ತರಬೇತುದಾರ ಕೆ.ವಸಂತಿ, ಕೆ.ಜನಾರ್ದನನ್, ಕೆ.ಎಂ.ರೆಜು ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
13 ಮತ್ತು 15 ವರ್ಷದೊಳಗಿನವರ ವಿಭಾಗದಲ್ಲಿ ಬಾಲಕರ ಮತ್ತು ಬಾಲಕಿಯರ ತಂಡಗಳು ಚಿನ್ನ ಗೆದ್ದಿವೆ. ಕುಂಡಂಕುಳಿ ಸರ್ಕಾರಿ ಹೈಯರ್ ಸೆಕೆಮಡರಿ ಶಾಲೆಯ ಪಿ.ಆದರ್ಶ, ಟಿ. ಅನುಷಾ, ಟಿ.ಕೆ.ಅಭಿಜಿತ್, ಕೆ.ಅಭಿನಂದ್, ಎ.ಎಸ್.ದಕ್ಷಿನ್, ಕೋಡೋತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪಿ.ಜೆ.ಅನನ್ಯ, ವಿ.ಅತುಲ್ಯ, ಅಂಚಲ್ ಮರಿಯಾ ಸುಜೇಶ್, ಕೆ.ಶ್ರೀನಂದ, ಅನನ್ಯಾ ಅಭಿಲಾಷ್, ಅಲ್ಕಾ ಜೈಮನ್, ಶಿವಪ್ರಿಯಾ ಪುನ್ನಪ್ಪುಳ್ಳಿ, ಅಶ್ವಿನ್ ಕೃಷ್ಣ, ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಪರವನಡ್ಕದ ಅಬಿತಾ ಬಾಲನ್ ತಂಡದಲ್ಲಿದ್ದರು.