ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ ಪರಿಶಿಷ್ಟ ವರ್ಗ/ಜಾತಿ ವಿಭಾಗದ ಉದ್ಯೋಗಾರ್ಥಿಗಳಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ನೊಂದಾವಣಾ ಶಿಬಿರ ಹಾಗೂ ಮಾಹಿತಿ ಕಾರ್ಯಗಾರವು ಡಿ.2ರಂದು ಜರಗಲಿದೆ.
ಬೆಳಿಗ್ಗೆ 10.30 ಗಂಟೆಗೆ ಎಣ್ಮಕಜೆ ಪಂಚಾಯತ್ ಸಭಾಂಗಣದಲ್ಲಿ ನಡೆಯುವ ಶಿಬಿರವನ್ನು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸುವರು. ಜಿಲ್ಲಾ ಉದ್ಯೋಗ ಕೇಂದ್ರ ಅಧಿಕಾರಿ ಧನಲಕ್ಷ್ಮಿ ಅಮ್ಮ ಟಿ.ಸಭೆಯ ಅಧ್ಯಕ್ಷತೆವಹಿಸುವರು. ಎಣ್ಮಕಜೆ ಗ್ರಾ. ಪಂ.ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಎಣ್ಮಕಜೆ ಟ್ರೈಬಲ್ ಎಕ್ಸ್‍ಂಟೇಶನ್ ಆಫೀಸರ್ ಟಿ.ಮಧು, ಮಂಜೇಶ್ವರ ಎಸ್.ಟಿ.ಡೆವಲಪ್ ಮೆಂಟ್ ಆಫೀಸರ್ ತಿರುಮಲೇಶ್ ಪಿ.ಕೆ.ಎಂಪ್ಲಾಯಿಮೆಂಟ್ ಆಫೀಸರ್ ಆಶಾ ಪಿ, ಜ್ಯೂನಿಯರ್ ಎಂಪ್ಲಾಯಿಮೆಂಟ್ ಆಫೀಸರ್ ಅನಿಲ್ ಕುಮಾರ್ ಮೊದಲಾದವರು ಭಾಗವಹಿಸಲಿರುವರು.ಉದ್ಯೋಗವಕಾಶಕ್ಕಾಗಿ ಇದುವರೆಗೂ ನೊಂದಾವಣೆ ನಡೆಸಲು ಅಸಾಧ್ಯವಾಗಿರುವವರಿಗೆ ಸಹಾಯಕವಾಗುವಂತೆ ಶಿಬಿರವನ್ನು ಆಯೋಜಿಸಲಾಗಿದ್ದು ಉದ್ಯೋಗಾರ್ಥಿಗಳು ಅಸಲಿ ದಾಖಲಿಗಳೊಂದಿಗೆ ಎಲ್ಲಾ ಪ್ರತಿಗಳನ್ನು ,ವಾಸ ಸ್ಥಳಕ್ಕೆ ಸಂಬಂಧಿಸಿದ ನೆಟಿವಿಟಿ ಸರ್ಟಿಫಿಕೇಟ್, ಇಲೆಕ್ಷನ್ ಐಡಿ ಕಾರ್ಡ್ ನೊಂದಾವಣಾ ಸಮಯದಲ್ಲಿ ಹಾಜರುಪಡಿಸಬೇಕು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.