ಫ್ರಾನ್ಸ್: ಫ್ರೆಂಚ್ ಐಷಾರಾಮಿ ಬ್ರ್ಯಾಂಡ್ ಸಂಸ್ಥೆ ಚಾನೆಲ್ ಮುಖ್ಯಸ್ಥರಾಗಿ ಭಾರತೀಯ ಮೂಲದ, ಯುನಿಲಿವರ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಲೀನಾ ನಾಯರ್ ಅವರನ್ನು ನೇಮಕ ಮಾಡಲಾಗಿದೆ.
ಯುನಿಲಿವರ್ ನಲ್ಲಿ ಜನವರಿಯಲ್ಲಿ ಲೀನ್ ನಾಯರ್ ಅವರ ಉದ್ಯೋಗದ ಅವಧಿ ಮಕ್ತಾಯವಾಗಲಿದ್ದು, ಜನವರಿಯಿಂದ ಚಾನೆಲ್ ಸಂಸ್ಥೆಯ ಸಿಇಒ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಲೀನಾ ನಾಯರ್ ಜಮ್ಶೆಡ್ಪುರ ಮೂಲದವರಾಗಿದ್ದು, ಅವರು 30 ವರ್ಷಗಳ ಹಿಂದೆ ಹಿಂದೂಸ್ತಾನ್ ಯುನಿಲಿವರ್ ನಲ್ಲಿ ಮ್ಯಾನೇಜ್‍ಮೆಂಟ್ ಟ್ರೈನಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಹೆಚ್‍ಯುಎಲ್‍ನ ಆಡಳಿತ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ ಮೊದಲ ಮಹಿಳೆ ಎಂಬ ಖ್ಯಾತಿಗೂ ಒಳಗಾದರು.
ಯುನಿಲಿವರ್ ಕಂಪೆನಿಯಲ್ಲಿ ಕಾರ್ಖಾನೆಗಳು, ಮಾನವ ಸಂಪನ್ಮೂಲ ಮತ್ತು ಮಾರಾಟ ವಿಭಾಗಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಪ್ರಗತಿ ಸಾಧಿಸಿದರು. ಐಕಾನಿಕ್ ಶನೆಲ್‍ನ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿರುವುದಕ್ಕೆ ನಾನು ವಿನಮ್ರಳಾಗಿದ್ದೇನೆ. ಶನೆಲ್‍ನ ಪ್ರಾತಿನಿಧ್ಯತೆಯಿಂದಾಗಿ ಸ್ಫೂರ್ತಿ ಪಡೆದಿದ್ದೇನೆ. ಇದು ಸೃಷ್ಟಿಯ ಸ್ವಾತಂತ್ರ್ಯದಲ್ಲಿ ನಂಬಿಕೆಯಿರುವ, ಮಾನವ ಸಾಮರ್ಥ್ಯವನ್ನು ಬೆಳೆಸುವಲ್ಲಿ ಮತ್ತು ಜಗತ್ತಿನಲ್ಲಿ ಧನಾತ್ಮಕ ಪ್ರಭಾವ ಬೀರುವ ಕಂಪನಿಯಾಗಿದೆ ಎಂದು ಹೇಳಿದ್ದಾರೆ.
ಕಳೆದ 30 ವರ್ಷಗಳಿಂದ ನನ್ನ ಮನೆಯಾಗಿರುವ ಯುನಿಲಿವರ್ ನಲ್ಲಿ ಸುದೀರ್ಘವಾಗಿ ವೃತ್ತಿಜೀವನ ಕಳೆದುದಕ್ಕೆ ನಾನು ಕೃತಜ್ಞಳಾಗಿದ್ದೇನೆ. ಈ ಕಂಪೆನಿ ನನಗೆ ಕಲಿಯಲು, ಬೆಳೆಯಲು ಸಂಸ್ಥೆಗೆ ಕೊಡುಗೆಗಳನ್ನು ನೀಡಲು ಅವಕಾಶ ನೀಡಿದೆ. ಯುನಿಲಿವರ್ ಬಗ್ಗೆ ನನಗೆ ಯಾವಾಗಲೂ ಹೆಮ್ಮೆ ಇದೆ ಎಂದು ಹೇಳಿದ್ದಾರೆ.
ಲಂಡನ್‍ನಲ್ಲಿ ನಾಯಕತ್ವ ಮತ್ತು ಸಾಂಸ್ಥಿಕ ಅಭಿವೃದ್ಧಿಯ ಮುಖ್ಯಸ್ಥರಾಗಿ ಮೂರು ವರ್ಷಗಳ ನಂತರ, 2016ರಲ್ಲಿ ಸಿಎಚ್‍ಆರ್‍ಒ ಆಗಿ ನಾಯರ್ ನೇಮಕಗೊಂಡರು.
ಸತತ 30 ವರ್ಷಗಳಿಂದ ಕಂಪೆನಿಗೆ ತಮ್ಮ ಸೇವೆಯ ಮೂಲಕ ಉತ್ತಮ ಕೊಡುಗೆ ನೀಡಿದ ನಿಮಗೆ ಆಭಾರಿ. ಅಲ್ಲದೇ ಕಳೆದ ಎರಡು ವರ್ಷಗಳಲ್ಲಿ ಕೋವಿಡ್‍ನ ಎಲ್ಲಾ ಸವಾಲುಗಳನ್ನು ಎದುರಿಸಲು ಇಡೀ ತಂಡ ಪಣತೊಟ್ಟು ನಿಂತು ಕಾರ್ಯನಿರ್ವಹಿಸಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ಇನ್ನು ಜಾಗತಿಕವಾಗಿ 50ಕ್ಕೂ ಹೆಚ್ಚು ದೇಶಗಳಲ್ಲಿ ನಮ್ಮ ಭವಿಷ್ಯದ ಉದ್ಯೋಗದಾತರ ಉದ್ದೇಶ, ಭವಿಷ್ಯಕ್ಕೆ ಸೂಕ್ತವಾದ ಸಂಸ್ಥೆಯನ್ನು ನಿರ್ಮಿಸುವಲ್ಲಿ ನಾಯರ್ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಈ ಹುದ್ದೆಯಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಯುನಿಲಿವರ್ ಸಿಇಒ ಅಲನ್ ಜೋಪ್ ಅವರು ಹೇಳಿದ್ದಾರೆ.