ತಿರುವನಂತಪುರಂ: ಬಸ್ ಪ್ರಯಾಣ ದರ ಏರಿಕೆ ಸಂಬಂಧ ಇಂದು ವಿದ್ಯಾರ್ಥಿ ಸಂಘಟನೆಗಳ ಜತೆ ಸಚಿವರು ಚರ್ಚೆ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಸಚಿವಾಲಯದ ಅನೆಕ್ಸ್ ಲಯಂ ಸಭಾಂಗಣದಲ್ಲಿ ಸಾರಿಗೆ ಮತ್ತು ಶಿಕ್ಷಣ ಸಚಿವರೊಂದಿಗೆ ಸಭೆ ನಡೆಯಲಿದೆ. ಬಸ್ ಪ್ರಯಾಣ ದರ ಏರಿಕೆ ಮಾಡಲು ತೀರ್ಮಾನಿಸಲಾಗಿದ್ದರೂ, ಎಷ್ಟು ಹೆಚ್ಚಿಸಬೇಕು, ರಿಯಾಯಿತಿ ದರ ಹೆಚ್ಚಿಸಬೇಕೇ, ಎಷ್ಟು ಹೆಚ್ಚಿಸಬೇಕು ಎಂಬ ಅಂತಿಮ ನಿರ್ಧಾರ ಇನ್ನೂ ಆಗಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಂಘಟನೆಗಳ ಜತೆ ಚರ್ಚೆ ನಡೆಸಲಾಗುತ್ತಿದೆ.
ವಿದ್ಯಾರ್ಥಿ ರಿಯಾಯಿತಿಯನ್ನು 1 ರೂ.ನಿಂದ 6 ರೂ.ಗೆ ಹೆಚ್ಚಿಸಬೇಕು ಎಂಬುದು ಬಸ್ ಮಾಲೀಕರ ಆಗ್ರಹವಾಗಿದೆ. ಆದರೆ ಇದು ಸ್ವೀಕಾರಾರ್ಹವಲ್ಲ ಎಂದು ವಿದ್ಯಾರ್ಥಿ ಗುಂಪುಗಳು ಹೇಳುತ್ತವೆ. ಒಂದೂವರೆ ರೂಪಾಯಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ನ್ಯಾಯಮೂರ್ತಿ ರಾಮಚಂದ್ರನ್ ಆಯೋಗ ಸಲ್ಲಿಸಿದ ವರದಿಯಲ್ಲಿ ಕನಿಷ್ಠ ರಿಯಾಯಿತಿ ದರವನ್ನು ರೂ. ಐದರಷ್ಟು ಮಾದಬಹುದೆಂದಿದೆ.
ಇದೇ ವೇಳೆ, ಸಾಮಾನ್ಯ ಜನರ ಕನಿಷ್ಠ ಬಸ್ ಪ್ರಯಾಣ ದರವನ್ನು 8 ರಿಂದ 10 ರೂ.ಗೆ ಹೆಚ್ಚಿಸಲು ಸರ್ಕಾರ ಬಯಸಿದೆ. ಹೆಚ್ಚಳ ಮಾಡುವಂತೆ ಬಸ್ ಮಾಲೀಕರು ಆಗ್ರಹಿಸುತ್ತಿದ್ದಾರೆ. ಖಾಸಗಿ ಬಸ್ ಮಾಲೀಕರ ಪ್ರಮುಖ ಬೇಡಿಕೆಗಳು ಕಿಲೋಮೀಟರ್‍ಗೆ ಪ್ರಸ್ತುತ 90 ಪೈಸೆಯಿಂದ ಒಂದು ರೂಪಾಯಿಗೆ ಹೆಚ್ಚಿಸುವುದು ಮತ್ತು ಕೊರೋನಾ ಅವಧಿ ಮುಗಿಯುವವರೆಗೆ ಬಸ್‍ಗಳ ಮೇಲಿನ ವಾಹನ ತೆರಿಗೆಯನ್ನು ಮನ್ನಾ ಮಾಡುವುದು ಎಂದಾಗಿದೆ. ಕಳೆದ ವಾರ ನಡೆದ ಸಭೆಯಲ್ಲಿ ಬಸ್ ಪ್ರಯಾಣ ದರವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ, ಆದರೆ ಎಷ್ಟು ಹೆಚ್ಚಳಗೊಳಿಸಬೇಕು ಎಂಬ ಬಗ್ಗೆ ಅಂತಿಮವಾಗಿಲ್ಲ. ಇದನ್ನು ನಿರ್ಧರಿಸಲು ಸರ್ಕಾರ ಉಪ ಸಮಿತಿಯನ್ನೂ ನೇಮಿಸಿತ್ತು. ಬಸ್ ಮಾಲೀಕರು ಮತ್ತೆ ಮುಷ್ಕರಕ್ಕೆ ಮುಂದಾದರೆ ಇನ್ನಷ್ಟು ಬಿಕ್ಕಟ್ಟು ಸೃಷ್ಟಿಯಾಗಬಹುದು ಎಂಬುದು ಸರ್ಕಾರದ ಅಭಿಪ್ರಾಯ.