ಮಂಜೇಶ್ವರ: ಕೇರಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಮಂಜೇಶ್ವರ ಸ್ಥಳೀಯ ಸಂಘಟನೆಯ ಮಿಷನ್ 2021-26 ರ ಸ್ನೇಹ ಭವನ ಯೋಜನೆಯ ಪ್ರಾದೇಶಿಕ ಸಮಿತಿ ರಚನೆ ಸಭೆ ಐಲ ಶ್ರೀ ಶಾರದಾ ಬೋವಿ ಎಯುಪಿ ಶಾಲೆಯಲ್ಲಿ ಜರಗಿತು. ಮಂಗಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಖದೀಜತ್ ರಿಸನಾ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಶಾಸಕ ಎ. ಕೆ. ಎಂ. ಅಶ್ರಫ್ ಉದ್ಘಾಟಿಸಿದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ, ಮಂಜೇಶ್ವರ ಸ್ಥಳೀಯ ಸಂಘಟನೆಯ ಚೆಯರ್ ಮೇನ್ ದಿನೇಶ್ ವಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಗೋಲ್ಡನ್ ರಹಮಾನ್, ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಂಗಲ್ಪಾಡಿ ಪಂಚಾಯಿತಿ ಸದಸ್ಯೆ ಸುಧಾಗಣೇಶ್, ಬಾಬು ಮಂಜೇಶ್ವರ, ಬಿ.ಪಿ.ಸಿ ವಿಜಯ ಕುಮಾರ್ ಪಾವಳ, ಮಂಜೇಶ್ವರ ಸ್ಥಳೀಯ ಸಂಘಟನೆಯ ಉಪಾಧ್ಯಕ್ಷ ಟಿ. ಡಿ. ಸದಾಶಿವ ರಾವ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುನಿತ ಜಿ. ಕೃಷ್ಣನಗರ, ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತ, ಶಾಲಾ ಪ್ರಬಂಧಕ ಆನಂದ , ಕಾಸರಗೋಡು ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ಭಾರ್ಗವಿ ಕುಟ್ಟಿ , ಕಾರ್ಯಕ್ರಮಕ್ಕೆ ಶುಭಾಸಂಶನೆ ಗೈದರು. ಕಾಸರಗೋಡು ಜಿಲ್ಲಾ ಸಂಘಟಣೆಯ ಜೊತೆ ಕಾರ್ಯದರ್ಶಿ , ಕಿರಣ್ ಪ್ರಸಾದ್ ಕೂಡ್ಲು ಯೋಜನೆಯ ಮಹತ್ವ ವಿವರಿಸಿ ಸಮಿತಿ ರಚಿಸಿದರು. ಶಾಲಾ ಅಧ್ಯಾಪಕ ಪದ್ಮನಾಭ ಐಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಕೇರಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಮಂಜೇಶ್ವರ ಸ್ಥಳೀಯ ಸಂಘಟನೆಯ ಕಾರ್ಯದರ್ಶಿ ಶಿವಪ್ರಸಾದ್ ಚೆರುಗೋಳಿ ಸ್ವಾಗತಿಸಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಜಲಾಜಾಕ್ಷಿ ವಂದಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಅಧ್ಯಾಪಕ ಸಂಘಟನೆಯ ಪದಾಧಿಕಾರಿಗಳು, ಹೈಯರ್ ಸೆಕಂಡರಿ ಪ್ರಾಂಶುಪಾಲರು, ವಿವಿಧ ಶಾಲಾ ಮುಖ್ಯೋಪಾಧ್ಯಾಯರು, ನಿವೃತ್ತ ಮುಖ್ಯೋಪಾಧ್ಯಾಯರು, ವಿವಿಧ ಸಾಮಾಜಿಕ , ಸಾಂಸ್ಕøತಿಕ, ಧಾರ್ಮಿಕ ಮುಖಂಡರು, ನೇತಾರರು, ನಿವೃತ್ತ ಸ್ಕೌಟ್ಸ್ ಮತ್ತು ಗೈಡ್ಸ್‍ನ ಅಧ್ಯಾಪಕರು ಧಾರ್ಮಿಕ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದರು. ಜಿಲ್ಲಾ ಕಮಿಷನರ್ ಶ್ರೀಕುಮಾರಿ ಟೀಚರ್ , ಎಡಿಒಸಿ ಸುಕನ್ಯಾ ಕೆ. ಟಿ , ನಾರಾಯಣ ರಾಜ್, ಮಂಜೇಶ್ವರ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಆದಿನಾರಾಯಣ ಭಟ್ ಸಹಕರಿಸಿದರು.