ಕೊಚ್ಚಿ: ಕಾಂಗ್ರೆಸ್ ನ ಹಿರಿಯ ನೇತಾರ ಪಿ.ಟಿ ಥೋಮಸ್ ಅವರ ಅಂತ್ಯಕ್ರಿಯೆ ನಿನ್ನೆ ಸಂಜೆ ನಡೆಯಿತು. ಹೋರಾಟದ ಕಟ್ಟಾ ಬೆಂಬಲಿಗರಾದ ಪಿಟಿ ಥಾಮಸ್ ಅವರನ್ನು ನೋಡಲು ಸಾವಿರಾರು ಮಂದಿ ನೆರೆದಿದ್ದರು. ಅಧಿಕೃತ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.
ಪಿಟಿ ಥ|ಓಮಸ್ ಅವರ ಇಚ್ಛೆಯಂತೆ ಧಾರ್ಮಿಕ ಸಮಾರಂಭಗಳನ್ನು ಹೊರತುಪಡಿಸಿ ಅಂತ್ಯಕ್ರಿಯೆ ನಡೆಯಿತು. ಪಾರ್ಥಿವ ಶರೀರವನ್ನು ಚಿತಾಗಾರಕ್ಕೆ ಕೊಂಡೊಯ್ಯುವಾಗ ಹಿನ್ನಲೆಯಲ್ಲಿ ಪಿ.ಟಿ.ಯವರ ಅ|ಂತಿಮ ಬೇಡಿಕೆಯಂತೆ ನೆಚ್ಚಿನ ಗೀತೆಯಾದ ಚಂದ್ರಕಳಭಂ ಹಾಡಲಾಯಿತು. ಅವರ ಇಚ್ಛೆಯಂತೆ ಕೊಚ್ಚಿಯ ರವಿಪುರಂ ಸ್ಮಶಾನದಲ್ಲಿ ಸಮಾಧಿ ಸಂಸ್ಕಾರ ನೆರವೇರಿಸಲಾಯಿತು. ಅಂತ್ಯಕ್ರಿಯೆಯನ್ನು ಸಂಜೆ 5:30 ಕ್ಕೆ ನಿಗದಿಪಡಿಸಲಾಗಿತ್ತು, ಆದರೆ ಹೆಚ್ಚಿನ ಸಂಖ್ಯೆಯ ಗಣ್ಯರ ಆಗಮನದ ಕಾರಣ ಒಂದು ಗಂಟೆ ತಡವಾಯಿತು.
ಇಡುಕ್ಕಿ ಜಿಲ್ಲೆಯ ಉಪ್ಪುತ್ತೋಡಿನಿಂದ ನಿನ್ನೆ ಬೆಳಗಿನ ಜಾವ ಅವರ ಕಾರ್ಯಕ್ಷೇತ್ರವಾಗಿದ್ದ ಕೊಚ್ಚಿಯ ಪಲರಿವಟ್ಟಂನಲ್ಲಿರುವ ನಿವಾಸಕ್ಕೆ ತರಲಾಗಿದ್ದ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಅಸಂಖ್ಯ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನಸಾಗರವೇ ಹರಿದು ಬಂದಿತ್ತು. ಹಲವರು ಘೋಷಣೆಗಳನ್ನು ಕೂಗುತ್ತಾ ಅಳಲು ತೋಡಿಕೊಳ್ಳುವ ಮೂಲಕ ಪ್ರೀತಿಯ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ಜನಸಂದಣಿಯನ್ನು ನಿಯಂತ್ರಿಸಲು ಪೋಲೀಸರು ಹಾಗೂ ಮುಖಂಡರು ಹರಸಾಹಸ ಪಟ್ಟರು.
ಬೆಳಗ್ಗೆ ಡಿಸಿಸಿ, ಟೌನ್ ಹಾಲ್, ತೃಕ್ಕಾಕರ ಸಮುದಾಯ ಭವನದಲ್ಲಿ ಹಾಕಲಾಗಿದ್ದ ಸಾರ್ವಜನಿಕರ ವೀಕ್ಷಣಾ ಸ್ಥಳಗಳಲ್ಲಿ ಜನರಿಂದ ತುಂಬಿ ತುಳುಕುತ್ತಿತ್ತು. ನಿನ್ನೆ ಬೆಳಗ್ಗೆಯಿಂದಲೇ ರಾಜ್ಯ ಕಾಂಗ್ರೆಸ್‍ನ ಹಿರಿಯ ನಾಯಕರು ಪಾರ್ಥಿವ ಶರೀರ ಹಾಗೂ ಅಂತಿಮ ಯಾತ್ರೆಗೆ ಆಗಮಿಸಿದ್ದರು. ರಾಹುಲ್ ಗಾಂಧಿ ಗೌರವ ವಂದನೆ ಸಲ್ಲಿಸಲು ಟೌನ್ ಹಾಲ್ ಗೆ ಆಗಮಿಸಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಲು ಆಗಮಿಸಿದ್ದರು.