ಕಾಸರಗೋಡು: ಉತ್ತರಪ್ರದೇಶ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ಕಾಶಿ ಕಾರಿಡಾರ್ ಸಮರ್ಪಣಾ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಹತ್ತು ಕೇಂದ್ರಗಳಲ್ಲಿ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮ ಹಾಗೂ ವಾರಾಣಸಿಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಷಣದ ನೇರ ಪ್ರಸಾರದ ಸೋಮವಾರ ಜರುಗಿತು.
ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನ, ಜೋಡುಕಲ್ಲು ಫ್ರೆಂಡ್ಸ್ ಸಭಾ ಭವನ, ಉಪ್ಪಳ ಐಲ ಶ್ರೀ ಭಗವತೀ ಕ್ಷೇತ್ರ, ಬದಿಯಡ್ಕ ಸಂಸ್ಕøತಿಕ ಭವನ, ಉದುಮ ತಲ್ಕ್ಲಾಯಿ ಶ್ರೀ ಭಗವತೀ ಕ್ಷೇತ್ರ, ಬಂದಡ್ಕ, ಕಾಞಂಗಾಡು ಶ್ರೀಕೃಷ್ಣ ಮಂದಿರ, ಮೂರನೇಮೈಲಿಗಲ್ಲು ಶ್ರೀ ಶಂಕರ ಅದ್ವೈತಾಶ್ರಮ, ವಯಲೋಡಿ ಸುಬ್ರಹ್ಮಣ್ಯ ಕ್ಷೇತ್ರ, ನೀಲೇಶ್ವರ ತಳಿಯಿಲ್ ಮಹಾದೇವ ಕ್ಷೇತ್ರ, ವಯಲಾಡಿ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಕಾರ್ಯಕ್ರಮ ನಡೆಯಿತು.
ಆಧ್ಯಾತ್ಮಿಕ ಸಂಗಮದಲ್ಲಿ ಸನ್ಯಾಸಿಗಳು, ಕ್ಷೇತ್ರ ಸ್ಥಾನಿಕರು, ಆಚಾರಕರ್ಮಿಗಳು, ಸಾಮಾಜಿಕ ಮುಖಂಡರು, ಸಾಂಕೃತಿಕ, ರಆಜಕೀಯ ಮುಖಮಡರು ಪಾಲ್ಗೊಂಡಿದ್ದರು. ಬಿಜೆಪಿ ಜಿಲ್ಲಾ, ಮಂಡಲ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಕಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಜ್ಯ ಸಮಿತಿ ಕೋರ್ಡಿನೇಟರ್ ಅಶೋಕನ್ ಕುಳನಾಡ್, ಮಂಡಲ ಸಮಿತಿ ಅಧ್ಯಕ್ಷೆ ಪ್ರಮಿಳಾ ಮಜಲ್, ಸವಿತಾ ಭಟ್, ಧನಂಜಯ ಮಧೂರು ಮುಂತಾದವರು ಉಪಸ್ಥಿತರಿದ್ದರು.