ಕಾಸರಗೋಡು: ಜಿಲ್ಲಾ ಗ್ರಂಥಾಲಯ ಕೌನ್ಸಿಲ್ ವತಿಯಿಂದ ಜಿಲ್ಲಾಮಟ್ಟದ ಕನ್ನಡ ವಾಚನಾ ಸ್ಪರ್ಧೆ ನಡೆಯಿತು. ಜಿಲ್ಲಾ ಗ್ರಂಥಾಲಯ ಕೌನ್ಸಿಲ್ ಸಮಿತಿ ಕಾರ್ಯದರ್ಶಿ ಪಿ.ಪ್ರಭಾಕರನ್ ಉದ್ಘಾಟಿಸಿದರು. ಜಿಲ್ಲಾ ಜತೆ ಕಾರ್ಯದರ್ಶಿ ಟಿ.ರಾಜನ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕೌನ್ಸಿಲ್ ಸಮಿತಿ ಸದಸ್ಯ ಕೆ.ಪಿ ಹುಸೈನ್ ಮಾಸ್ಟರ್, ಮಂಜೇಶ್ವರ ತಾಲೂಕು ಘಟಕ ಅಧ್ಯಕ್ಚ ವಿ.ಅಬ್ದುಲ್ಲ, ಕೆ.ಟಿ ವಿಜಯನ್, ಬಶೀರ್ ಕೊಟ್ಟೋಡಿ, ದಾಸ್ಪ ಶೆಟ್ಟಿ ಉಪಸ್ಥಿತರಿದ್ದರು. ತಾಲೂಕು ಸಮಿತಿ ಕಾರ್ಯದರ್ಶಿ ಡಿ. ಕಮಲಾಕ್ಷ ಸ್ವಾಗತಿಸಿದರು. ಶ್ರೀಕುಮಾರಿ ವಂದಿಸಿದರು.