ನವದೆಹಲಿ: ಗ್ರಾಹಕ ಹಿತದೃಷ್ಟಿಯಿಂದ ಆನ್ಲೈನ್ ಪಾವತಿ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯನ್ನು ಹೊಸ ವರ್ಷದ ಮೊದಲ ದಿನದಿಂದಲೇ ನಿರೀಕ್ಷಿಸಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೊಸ ನಿಯಮಗಳ ಮಾರ್ಗಸೂಚಿ ಪ್ರಕಟಿಸಿದ್ದು, ಅದು ಜನವರಿ 1ರಿಂದ ಜಾರಿಗೆ ಬರಲಿದೆ.
ನವದೆಹಲಿ: ಗ್ರಾಹಕ ಹಿತದೃಷ್ಟಿಯಿಂದ ಆನ್ಲೈನ್ ಪಾವತಿ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯನ್ನು ಹೊಸ ವರ್ಷದ ಮೊದಲ ದಿನದಿಂದಲೇ ನಿರೀಕ್ಷಿಸಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೊಸ ನಿಯಮಗಳ ಮಾರ್ಗಸೂಚಿ ಪ್ರಕಟಿಸಿದ್ದು, ಅದು ಜನವರಿ 1ರಿಂದ ಜಾರಿಗೆ ಬರಲಿದೆ.
ಆರ್ಬಿಐನ ಹೊಸ ನಿಯಮ ಪ್ರಕಾರ, ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್, ಫ್ಲಿಪ್ಕಾರ್ಟ್, ಆನ್ಲೈನ್ ಡೆಲಿವರಿ ವೇದಿಕೆಗಳಾದ ಜೊಮ್ಯಾಟೊ, ಸ್ವಿಗ್ಗಿ ಅಥವಾ ಬೇರಾವುದೇ ಆನ್ಲೈನ್ ವಹಿವಾಟು ಮಾಡುವುದಾದರೂ ಗ್ರಾಹಕರು ಜನವರಿ 1ರಿಂದ ಪ್ರತಿ ವಹಿವಾಟಿನ ಸಂದರ್ಭದಲ್ಲೂ ಕಾರ್ಡ್ ಮಾಹಿತಿಯನ್ನು ತುಂಬ ಬೇಕಾಗುತ್ತದೆ. ಯಾವುದೇ ಕಂಪನಿಗಳು ಗ್ರಾಹಕರ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ವಿವರಗಳನ್ನು ಕಂಪನಿಗಳು ಶೇಖರಿಸಿ ಇಡುವಂತಿಲ್ಲ. ಆದಾಗ್ಯೂ, ಗ್ರಾಹಕರು ಒಪ್ಪಿಗೆ ನೀಡಿದರೆ ಈ ವೇದಿಕೆಗಳು ಅವರ ಕಾರ್ಡ್ಗಳ ಮಾಹಿತಿ ಸೇವ್ ಮಾಡಿಕೊಳ್ಳಲು ಅನುಮತಿ ನೀಡಿದರೆ ಪದೇಪದೆ ವಿವರ ತುಂಬುವ ಸಮಸ್ಯೆಯಿಂದ ಪಾರಾಗಬಹುದು.
ಪಾವತಿ ನಿಯಮ ಬಿಗಿ: ಗ್ರಾಹಕರ ಹಿತರಕ್ಷಣೆಗಾಗಿ ಅವರ ಕಾರ್ಡ್ ಬಳಕೆಯ ಸುರಕ್ಷತೆಯನ್ನು ಹೆಚ್ಚಿಸುವುದಕ್ಕಾಗಿ ಕಳೆದ ವರ್ಷ ಮಾರ್ಚ್ ನಲ್ಲಿ ಆರ್ಬಿಐ ಈ ಮಾರ್ಗಸೂಚಿಯನ್ನು ಪ್ರಕಟಿಸಿತ್ತು. ಈ ವರ್ಷ ಸೆಪ್ಟೆಂಬರ್ನಲ್ಲಿ ಕಾರ್ಡ್ ಟೋಕನೈಸೇಷನ್ ಸೇವೆಗಳ ನಿಯಮವನ್ನು ಇನ್ನಷ್ಟು ಬಿಗಿಗೊಳಿಸಿದೆ. ಕಾರ್ಡ್ಗಳ ಮಾಹಿತಿ ಸಂಗ್ರಹಿಸಿ ಇಡುವುದಕ್ಕೆ ಗ್ರಾಹಕರ ಹೆಚ್ಚುವರಿ ಅನುಮತಿಯನ್ನು ಕಂಪನಿಗಳು ಪಡೆಯಬೇಕು ಎಂದು ಅದು ಸೂಚಿಸಿತ್ತು. ಈ ರೀತಿ ಅನುಮತಿ ನೀಡಿದರೆ ಕಾರ್ಡ್ ಬಳಸದೆ ನೇರವಾಗಿ ಆನ್ಲೈನ್ ವಹಿವಾಟು ನಡೆಸುವುದಕ್ಕೆ ಈ ಕಂಪನಿಗಳು ಅವಕಾಶ ನೀಡುತ್ತವೆ. ಆದರೆ ಅಂತಾರಾಷ್ಟ್ರೀಯ ವಹಿವಾಟಿಗೆ ಇದು ಅನ್ವಯವಾಗುವುದಿಲ್ಲ. ಸದ್ಯ ಮಾಸ್ಟರ್ಕಾರ್ಡ್ ಮತ್ತು ವಿಸಾ ಕಾರ್ಡ್ಗಳಷ್ಟೆ ಟೋಕನೈಸ್ ಅಗುತ್ತಿವೆ. ಉಳಿದವುಗಳ ಟೋಕನೈಸೇಷನ್ ಕೂಡ ಶೀಘ್ರವೇ ಆಗಬಹುದು. ಈ ಸೇವೆಗಾಗಿ ಗ್ರಾಹಕರು ಹೆಚ್ಚುವರಿ ಶುಲ್ಕ ಪಾವತಿಸಬೇಕಾದ್ದಿಲ್ಲ.