ಉಪ್ಪಳ: ಬಿಎಂಎಸ್ ಪೈವಳಿಕೆ ಪಂಚಾಯತಿ ಟೈಲರಿಂಗ್ ಮಜ್ದೂರ್ ಸಂಘದ ಚೇರಾಲ್ ಯೂನಿಟ್ ಸಮ್ಮೆಳನ ಶ್ರೀ ಶಾರದಾ ಭಜನಾ ಮಂದಿರದ ಪರಿಸರದಲ್ಲಿ ಇತ್ತೀಚೆಗೆ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಯೂನಿಟ್ ಅಧ್ಯಕ್ಷೆ ಸವಿತಾ ಚೇರಾಲ್ ವಹಿಸಿದ್ದರು. ಕಾಸರಗೋಡು ಜಿಲ್ಲಾ ಬಿಎಂಎಸ್ ಉಪಾದ್ಯಕ್ಷೆ, ಕಾಸರಗೊಡು ಜಿಲ್ಲಾ ಟೈಲರಿಂಗ್ ಯೂನಿಯನ್ ಅಧ್ಯಕ್ಷೆ ಗೀತಾ ಬಾಲಕೃಷ್ಣನ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಬಿಎಂಎಸ್ ಪೈವಳಿಕೆ ಪಂಚಾಯತಿ ಘಟಕದ ಅಧ್ಯಕ್ಷ ದೇವಿಪ್ರಸಾದ್ ಶುಭಾಂಶನೆಗೈದರು. ಯಶೋದ ಲೋಕೇಶ್ ಸ್ವಾಗತಿಸಿ, ನಳಿನಿ ಚೇರಾಲ್ ವಂದಿಸಿದರು.