ತೊಡುಪುಳ: ತೊಡುಪುಳ ಠಾಣೆಯಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಲಾಕ್‌ಅಪ್‌ನಿಂದ ತಪ್ಪಿಸಿಕೊಂಡು ಪಕ್ಕದ ನದಿಗೆ ಹಾರಿದ್ದ ಆದರೆ ದುರಾದೃಷ್ಟವಶಾತ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
35 ವರ್ಷದ ಆರೋಪಿ ಶಫಿ ಮೃತ ದುರ್ದೈವಿ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಮುಂದಾದಾಗ ಪರಾರಿಯಾಗಿದ್ದಾನೆ.
ಲಾಕ್‌ಅಪ್ ಅನ್ನು ಸರಿಯಾಗಿ ಲಾಕ್ ಮಾಡಿರಲಿಲ್ಲ. ಹೀಗಾಗಿ ಆರೋಪಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನದಿಗೆ ಹಾರಿದ್ದ ಶಫಿಯನ್ನು ಸ್ಥಳೀಯರೊಂದಿಗೆ ಸೇರಿ ಪೊಲೀಸರು ದಡದ ಮೂಲಕ ಅಟ್ಟಿಸಿಕೊಂಡು ಹೋಗಿದ್ದರು. ಈ ವೇಳೆ ಸುಮಾರು ಒಂದು ಕಿಲೋಮೀಟರ್ ಈಜಿದನು. ಅಷ್ಟರಲ್ಲಿ ಅಲ್ಲಿಗೆ ಅಗ್ನಿಶಾಮಕ ದಳವೂ ಬಂದಿತ್ತು. ನಾವೆಲ್ಲರೂ ಅವನನ್ನು ದಡಕ್ಕೆ ಬರುವಂತೆ ಮನವಿ ಮಾಡಿದ್ದೇವು. ಆದರೆ ಅವನು ನಿರಾಕರಿಸಿದನು. ಸ್ವಲ್ಪ ಸಮಯದ ನಂತ ನೀರಿನಲ್ಲಿ ಮುಳುಗಿದನು ಎಂದು ಪೊಲೀಸರು ಹೇಳಿದರು.
ಶಫಿ ವಿರುದ್ಧ ಸುಮಾರು 18 ಅಥವಾ 19 ಪ್ರಕರಣಗಳು ದಾಖಲಾಗಿದ್ದು, ನಿನ್ನೆ ಬೆಳಗ್ಗೆ ಹಲ್ಲೆ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಠಾಣೆಯ ಪಕ್ಕದಲ್ಲಿ ತೊಡುಪುಳ ನದಿ ಹರಿಯುತ್ತದೆ.