ಮುಳ್ಳೇರಿಯ : ಸಂಸ್ಕøತ ಭಾರತಿ ಕಾಸರಗೋಡು ಮಂಗಳೂರು ಗ್ರಾಮಾಂತರ ವಿಭಾಗದ ವತಿಯಿಂದ ಭಗವದ್ಗೀತಾ ಜಯಂತಿ ಹಾಗೂ ವಿವೇಕಾನಂದ ಜಯಂತಿಯ ಅಂಗವಾಗಿ ಡಿ. 25ರಂದು ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳು ನಡೆಯಲಿದೆ.
ಬೆಳಿಗ್ಗೆ 9ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ನಾರಂಪಾಡಿ ಶ್ರೀ ಉಮಾಮಹೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ತಲೇಕ ಸುಬ್ರಹ್ಮಣ್ಯ ಭಟ್ ಉದ್ಘಾಟಿಸುವರು. ಸಂಸ್ಕøತ ಭಾರತೀ, ಕಾಸರಗೋಡು ಜಿಲ್ಲಾ ಸಂಯೋಜಕ ಎಸ್.ಎಂ. ಉಡುಪ ಅಧ್ಯಕ್ಷತೆ ವಹಿಸುವರು. ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಸಾರಿಯೊ ವಿಶೇಷ ಅತಿಥಿಗಳಾಗಿ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು, ಅಗಲ್ಪಾಡಿ ವಸಂತಿ ಟೀಚರ್ ಅತಿಥಿಗಳಾಗಿ ಭಾಗವಹಿಸುವರು.
ನಂತರ ವಿವಿಧ ಸ್ಪರ್ಧೆಗಳು, ಮಧ್ಯಾಹ್ನ ಭೋಜನ ಸ್ಪರ್ಧೆಗಳ ಮುಂದುವರೆಯುವಿಕೆ, ಸಂಜೆ 3:30ರಿಂದ ಮಾತೃಪೂಜನ ಹಾಗೂ ಜನ್ಮದಿನಾಚರಣೆ, ಸಂಜೆ 4:30ರಿಂದ ಸಮಾರೋಪ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ವಕೀಲ ಮಹಮ್ಮದ್ ಅಸ್ಗರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಸ್ಕೃತ ಭಾರತೀ ಕಾಸರಗೋಡು ಸಂಯೋಜಕ ಚಂದ್ರಶೇಖರ ಪಾರ್ಥಕೊಚ್ಚಿ ಅಧ್ಯಕ್ಷತೆ ವಹಿಸುವರು. ಸಂಸ್ಕøತ ಭಾರತೀ ಕಾಸರಗೋಡು ಜಿಲ್ಲಾ ಸಂಯೋಜಕ ಎಸ್.ಎಂ ಉಡುಪ ಉಪಸ್ಥಿತರಿರುವರು. ಭಗವದ್ಗೀತಾ ಜಯಂತಿ ಹಾಗೂ ವಿವೇಕಾನಂದ ಜಯಂತಿಯ ಅಂಗವಾಗಿ ಜಿಲ್ಲಾ ಮಟ್ಟದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ಕೆಳಗಿನ ಸ್ಪಧೆಗಳ ನಡೆಯಲಿದೆ. ವಿದ್ಯಾರ್ಥಿ ವಿಭಾಗದಲ್ಲಿ ಗೀತಾ ಕಂಠಪಾಠ ಸ್ಪರ್ಧೆ, 12ನೇ ಅಧ್ಯಾಯದ ಪ್ರಾರಂಭದ 10 ಶ್ಲೋಕಗಳು (ವಯೋಮಿತಿ 5 ರಿಂದ 11 ವರ್ಷ), 12ನೇ ಅಧ್ಯಾಯದ 11ರಿಂದ 20ವರೆಗಿನ 10 ಶ್ಲೋಕಗಳು (ವಯೋಮಿತಿ 11ರಿಂದ 16ವರ್ಷ), ವಯೋಮಿತಿ 10ರಿಂದ 16ವರ್ಷದೊಳಗಿನವರಿಗೆ ರಸಪ್ರಶ್ನೆ ಸ್ಪರ್ಧೆ, ಸ್ವಾಮಿ ವಿವೇಕಾನಂದರ ಕುರಿತು (ಸಮಯ ಮಿತಿ 5ನಿಮಿಷ) ಭಾಷಣ ಸ್ಪರ್ಧೆ(ವಯೋಮಿತಿ 10 ರಿಂದ18) ಮೊದಲಾದ ಸ್ಪರ್ಧೆಗಳು ನಡೆಯಲಿದೆ.
ಸಾರ್ವಜನಿಕ ವಿಭಾಗದಲ್ಲಿ ಗೀತಾ ಕಂಠಪಾಠ ಸ್ಪರ್ಧೆ 15ನೇ ಅಧ್ಯಾಯ ಸಂಪೂರ್ಣ, ವಯೋಮಿತಿ 16 ವರ್ಷ ಮೇಲ್ಪಟ್ಟವರಿಗೆ ರಸಪ್ರಶ್ನೆ ಸ್ಪರ್ಧೆ, ಸ್ವಾಮಿ ವಿವೇಕಾನಂದರ ಕುರಿತು (ಸಮಯದ ಮಿತಿ 3ನಿಮಿಷ) ಸ್ವರಚಿತ ಕಥಾವಾಚನ ಸ್ಪರ್ಧೆ, ಭಗವಾನ್ ಶ್ರೀಕೃಷ್ಣ ಹಾಗೂ ಭಗವದ್ಗೀತೆ (ಸಮಯದ ಮಿತಿ 3 ನಿಮಿಷ) ಕುರಿತು ಸ್ವರಚಿತ ಕವನ ವಾಚನ, ಶ್ರೀ ಕೃಷ್ಣ ಭಗವಾನ್ ಹಾಗೂ ಭಗವದ್ಗೀತೆ (ಸಮಯದ ಮಿತಿ 5 ನಿಮಿಷ) ವಿಷಯದಲ್ಲಿ ಭಾಷಣ ಸ್ಪರ್ಧೆಯೂ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 8825502393, 9495905275 ಎಂಬ ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಿದ್ದಾರೆ.