ತಿರುವನಂತಪುರ: ಆಯುರ್ವೇದ ಪದವಿ ಹೊಂದಿರುವ ನೋಂದಾಯಿತ ವೈದ್ಯರಿಗೂ ಇನ್ನು ಡ್ರೈವಿಂಗ್ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸುವವರಿಗೆ ವೈದ್ಯಕೀಯ ಪ್ರಮಾಣಪತ್ರಗಳನ್ನು ನೀಡಲು ಅನುಮತಿಸಲಾಗಿದೆ. ಇದಕ್ಕೆ ಅನುಮತಿ ನೀಡಿ ಸಾರಿಗೆ ಸಚಿವ ಆಂಟನಿ ರಾಜು ಆದೇಶ ಹೊರಡಿಸಿದ್ದಾರೆ.
ಇದುವರೆಗೆ ಅಲೋಪತಿ ವೈದ್ಯರು ಮತ್ತು ಆಯುರ್ವೇದ ಸ್ನಾತಕೋತ್ತರ ಪದವೀಧರರ ವೈದ್ಯಕೀಯ ಪ್ರಮಾಣಪತ್ರಗಳನ್ನು ಮಾತ್ರ ಚಾಲನಾ ಪರವಾನಗಿಗೆ ಪರಿಗಣಿಸಲಾಗುತ್ತಿತ್ತು.
ಹೊಸ ಆದೇಶದ ಅನುಸಾರ, ಆಯುರ್ವೇದದಲ್ಲಿ ಪದವಿ ಹೊಂದಿರುವ ನೋಂದಾಯಿತ ವೈದ್ಯರು ನೀಡುವ ಪ್ರಮಾಣಪತ್ರಗಳನ್ನು ಇನ್ನು ಚಾಲನಾ ಪರವಾನಗಿಗಾಗಿ ಬಳಸಬಹುದು.