ನವದೆಹಲಿ: ಮುಂದಿನ ದಿನಗಳಲ್ಲಿ ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಕಾಣಲಿದೆ, ಆದರೆ ಅದರ ತೀವ್ರತೆ ಕಡಿಮೆಯಿರಲಿದೆ ಎಂದು ಓಮಿಕ್ರಾನ್ ಕಂಡು ಹಿಡಿದ ದ.ಆಫ್ರಿಕಾ ವೈದ್ಯೆ ಆಂಜೆಲಿಕ್ ಕೊಯೆಝಿ ಅವರು ತಿಳಿಸಿದ್ದಾರೆ.
ಓಮಿಕ್ರಾನ್ ರೂಪಾಂತರಿ ವೈರಾಣು ಮೊದಲ ಬಾರಿಗೆ ದ.ಆಫ್ರಿಕಾದಲ್ಲಿ ಪತ್ತೆಯಾಗಿತ್ತು. ಆಂಜೆಲಿಕ್ ಕೊಯೆಝಿ ಅವರು ವೈರಾಣುವನ್ನು ಮೊದಲು ಪತ್ತೆ ಹಚ್ಚಿದ್ದರು.
ಲಸಿಕೆ ಹಾಕಿಸಿಕೊಂಡವರಿಗೆ ಒಮಿಕ್ರಾನ್ ವೈರಾಣುವಿನಿಂದ ರಕ್ಷಣೆ ದೊರೆಯುವ ಭರವಸೆಯನ್ನು ಅವರು ನೀಡಿದ್ದಾರೆ. ಅಲ್ಲದೆ ಓಮಿಕ್ರಾನ್ ತಳಿ ಹರಡುವಿಕೆಯನ್ನು ಲಸಿಕೆ ನಿಯಂತ್ರಿಸುತ್ತದೆ ಎಂದಿದ್ದಾರೆ.