ಕಣ್ಣೂರು: ಕಣ್ಣೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊಫೆಸರ್ ಗೋಪಿನಾಥ್ ರವೀಂದ್ರನ್ ಅವರಿಗೆ ನಕ್ಸಲ್ ಭಯೋತ್ಪಾದಕರಿಂದ ಕೊಲೆ ಬೆದರಿಕೆ ಬಂದಿದೆ. ಕಬನಿದಳಂ ಎಂಬ ಸಂಘಟನೆ ಈ ಬೆದರಿಕೆ ಹಾಕಿದೆ. ವಿಸಿ ಕಚೇರಿಗೆ ಅಂಚೆ ಮೂಲಕ ಬೆದರಿಕೆ ಪತ್ರ ಬಂದಿದೆ. ಪತ್ರದಲ್ಲಿ ಕಟುವಾದ ಉಲ್ಲೇಖಗಳಿವೆ.
ಉಪಕುಲಪತಿಗಳ ತಲೆಯನ್ನು ಕತ್ತರಿಸಿ ವಿಶ್ವವಿದ್ಯಾಲಯದ ಆವರಣದಲ್ಲಿ ಇರಿಸಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಮಲಯಾಳಂ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಸಿಪಿಎಂ ನಾಯಕ ಕೆ.ಕೆ.ರಾಗೇಶ್ ಅವರ ಪತ್ನಿ ಪ್ರಿಯಾ ವರ್ಗೀಸ್ ಅವರನ್ನು ನೇಮಿಸಿರುವ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪ್ರಿಯಾ ಅವರನ್ನು ನೇಮಕ ಮಾಡಿದರೆ ಅದರ ಪರಿಣಾಮವನ್ನು ಪ್ರಿಯಾ ಅನುಭವಿಸಬೇಕಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಪತ್ರವನ್ನು ಕಣ್ಣೂರು ಸಿವಿಲ್ ಸ್ಟೇಷನ್ ಅಂಚೆ ಕಚೇರಿಯಿಂದ ಪೋಸ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ. ಪೋಲೀಸರು ತನಿಖೆ ಆರಂಭಿಸಿದ್ದಾರೆ.
ಗೋಪಿನಾಥ್ ರವೀಂದ್ರನ್ ಅವರನ್ನು ಕಣ್ಣೂರು ವಿಸಿ ಆಗಿ ಮರು ನೇಮಕ ಮಾಡಿರುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದು, ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.