ತಿರುವನಂತಪುರ: ರಾಜ್ಯದಲ್ಲಿ ಬಾಲಕಿಯರ ಹಾಗೂ ಬಾಲಕರ ಪ್ರತ್ಯೇಕವಿರುವ ಶಾಲೆಗಳ ಸಂಖ್ಯೆ ಕಡಿಮೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ವಿ.ಶಿವಂ ಕುಟ್ಟಿ ಹೇಳಿದ್ದಾರೆ. ಮಕ್ಕಳು ಒಟ್ಟಿಗೆ ಅಧ್ಯಯನ ಮಾಡಲು ಪ್ರೋತ್ಸಾಹಿಸಲಾಗುವುದು. ಪಿಟಿಎ ನಿರ್ಧರಿಸಿದರೆ, ಮಿಶ್ರ ಶಾಲೆಗೆ ಅನುಮೋದನೆ ನೀಡಲಾಗುವುದು. ಬಾಲಕಿಯರ ಮತ್ತು ಬಾಲಕರ ಶಾಲೆಯನ್ನು ಮಿಶ್ರ ಶಿಕ್ಷಣಾಲಯಗಳಾಗಿ ಬದಲಾಯಿಸಲು ಬಯಸಿದರೆ, ಅದನ್ನು ನಿರ್ಧರಿಸಲು ಆಯಾ ಪಿಟಿಎಗೆ ಹಕ್ಕಿದೆ. ಲಿಂಗ ಸಮಾನತೆಯ ಸಮವಸ್ತ್ರವನ್ನು ನಿರ್ಧರಿಸುವುದೂ ಪಿಟಿಎಗೆ ಬಿಟ್ಟದ್ದು ಎಂದರು.
ಇದು ಶಿಕ್ಷಣ ಇಲಾಖೆ ಕೇಂದ್ರಿತ ನಿರ್ಧಾರವಲ್ಲ ಎಂದರು. ಶಿಕ್ಷಣ ಇಲಾಖೆಯು ಆಯಾ ಶಾಲೆಯ ಪಿಟಿಎ, ಶಿಕ್ಷಕರು ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಸರ್ವಾನುಮತದಿಂದ ತೆಗೆದುಕೊಳ್ಳುವ ನಿರ್ಧಾರವನ್ನು ಮಾತ್ರ ಅನುಮೋದಿಸುತ್ತದೆ. ಗಂಡು-ಹೆಣ್ಣು ಮಕ್ಕಳು ಒಟ್ಟಿಗೆ ಓದುವುದಕ್ಕೆ ಶಿಕ್ಷಣ ಇಲಾಖೆ ಅಭ್ಯಂತರವಿಲ್ಲ ಎಂದು ಸಚಿವ ಶಿವಂಕುಟ್ಟಿ ತಿಳಿಸಿರುವರು.