ಕಾಸರಗೋಡು: ಶಬರಿಮಲೆ ಶ್ರೀ ಅಯ್ಯಪ್ಪ ಸೇವಾಸಮಾಜ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಅಯ್ಯಪ್ಪ ಮಹಾ ಸಂಗಮ ವಿದ್ಯಾನಗರದ ಚಿನ್ಮಯ ಸಭಾಂಗಣದಲ್ಲಿ ಜರುಗಿತು. ಶಬರಿಮಲೆ ಶ್ರೀ ಅಯ್ಯಪ್ಪ ಸೇವಾ ಸಮಾಜ ಕೇರಳ ಘಟಕ ಅಧ್ಯಕ್ಷ ಅಕ್ಕೀರಮಣ್ ಕಾಳಿದಾಸನ್ ಸಮಾರಂಭ ಉದ್ಘಾಟಿಸಿದರು. ಚಿನ್ಮಯ ಮಿಶನ್ ಕೇರಳ ಪ್ರಾಂತ ಸಮಿತಿ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ದೀಪ ಬೆಳಗಿಸಿ, ಆಶೀರ್ವಚನ ನೀಡಿದರು.
ಜಿಲ್ಲಾಧ್ಯಕ್ಷ ಕೆ. ಶಶಿಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಅರವಿಂದಾಕ್ಷನ್, ವಿಜಿಂದ್ ರಾಮಕೃಷ್ಣನ್, ಇರವಿಲ್ ರಾಮದಾಸನ್ ವಾಳುನ್ನವರ್, ಸಂದೀಪ್ ಪೆರಿಮನ, ನಾರಾಯಣ ಗುರುಸ್ವಾಮಿ ಕೊಟ್ಟೋಡಿ. ಪ್ರೇಮಲತಾ ಟೀಚರ್, ಸುರೇಶ್ ಕೀಯೂರ್, ರೋಹಿತಾಕ್ಷನ್ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಟಿ.ರಾಧಾಕೃಷ್ಣನ್ ನಾಯರ್ ಸ್ವಾಗತಿಸಿದರು. ಕಾರ್ಯದರ್ಶಿ ರಂಜಿತ್ ಮಾವುಂಗಾಲ್ ವಂದಿಸಿದರು.