ಕಾಸರಗೋಡು: ಸಪ್ಲೈಕೋ ವತಿಯಿಂದ ನಡೆಯುತ್ತಿರುವ ಕ್ರಿಸ್ಮಸ್-ಹೊಸ ವರ್ಷ ಮೇಳದಲ್ಲಿ ಒಂದೇ ಬಾರಿಗೆ ಹೆಚ್ಚು ಮೊತ್ತದ ಸಾಮಗ್ರಿ ಖರೀದಿಸುವ ಮಹಿಳೆ ಮತ್ತು ಪುರುಷರಿಗಾಗಿ 5ಸಾವಿರ ರೂ. ಮೊತ್ತದ ನಗದು ಬಹುಮಾನ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ.
ಡಿ. 18ರಿಂದ ಜ.5ರ ವರೆಗಿನ ಕಾಲಾವಧಿಯಲ್ಲಿ ಮಾವೇಲಿ, ಮೊಬೈಲ್ ಮಾವೇಲಿ, ಅಪ್ನಾ ಬಜಾರ್, ಸೂಪರ್ ಸ್ಟೋರ್, ಸೂಪರ್ ಮಾರ್ಕೆಟ್, ಪೀಪಲ್ಸ್ ಬಜಾರ್ ಮುಂತಾದೆಡೆಯಿಂದ ಸಾಮಗ್ರಿ ಖರೀದಿಸುವವರಿಗೆ ಈ ಬಹುಮಾನ ಲಭಿಸಲಿದೆ. ರಾಜ್ಯ ಮಟ್ಟದಲ್ಲಿ ಇಬ್ಬರಿಗೆ ಬಹುಮಾನ ಲಭ್ಯವಾಗಲಿದೆ. ನೋಂದಾವಣೆ ನಡೆಸುವ ಲಿಂಕ್ ಸಾಮಗ್ರಿ ಖರೀದಿಸಿದ ಬಿಲ್ಲಿನಲ್ಲಿರಲಿದೆ. ಬಹುಮಾನ ಪಡೆದುಕೊಳ್ಳಲು ಆಗಮಿಸುವವರು, ಅಸಲಿ ಬಿಲ್ ಹಾಗೂ ಸರ್ಕಾರ ಸೂಚಿಸಿರುವ ಗುರುತಿನ ಚೀಟಿಯೊಂದಿಗೆ ಆಗಮಿಸುವಂತೆ ಪ್ರಕಟಣೆ ತಿಳಿಸಿದೆ.