HEALTH TIPS

ಸಂಘಪರಿವಾರದ ಮೇಲಿನ ಜಿಹಾದಿ-ಕಮ್ಯೂನಿಸ್ಟ್ ಭಯೋತ್ಪಾದಕ ದಾಳಿಗೆ ಮೂಕಪ್ರೇಕ್ಷಕರಾಗುತ್ತಿರುವ ಪೊಲೀಸರು: ಕೆ.ಟಿ ಜಯಕೃಷ್ಣನ್ ಸಂಸ್ಮರಣಾ ಸಮಾರಂಭದಲ್ಲಿ ನ್ಯಾಯವಾದಿ ಪ್ರಕಾಶ್‍ಬಾಬು ಆರೋಪ

                               

                ಕಾಸರಗೋಡು: ಸಂಘಪರಿವಾರ ಸದಸ್ಯರ ಮೇಲೆ ಜಿಹಾದಿ-ಕಮ್ಯೂನಿಸ್ಟ್ ಭಯೋತ್ಪಾದಕ ದಾಳಿ ನಡೆಯುತ್ತಿದ್ದರೆ, ಕೇರಳದ ಪೊಲೀಸರು ಮೂಕಪ್ರೇಕ್ಷಕರಾಗುತ್ತಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ವಕೀಲ ಕೆ.ಪಿ ಪ್ರಕಾಶ್‍ಬಾಬು ತಿಳಿಸಿದ್ದಾರೆ.

            ಅವರು ಕಾಞಂಗಾಡು ಅಲಾಮಿಪಳ್ಳಿ ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಡೆದ ಯುವಮೋರ್ಚಾ ನೇತಾರರಾಗಿದ್ದ ಸ್ವರ್ಗೀಯ ಕೆ.ಟಿ ಜಯಕೃಷ್ಣನ್ ಮಾಸ್ಟರ್ ಸಂಸ್ಮರಣಾ ದಿನಾಚರಣೆ ಸಮಾವೇಶ ಉದ್ಘಾಟಿಸಿ ಮಾತನಾಡಿದರು.  ಕೇರಳದ ಪೊಲೀಸರು ಸಂಘ ಪರಿವಾರದ ತಾಳ್ಮೆ ಪರೀಕ್ಷೆ ನಡೆಸುತ್ತಿದ್ದಾರೆ. ಸಂಘಟನೆ ಸದಸ್ಯರ ತಾಳ್ಮೆಯನ್ನು ದೌರ್ಬಲ್ಯವೆಂದು ಪರಿಗಣಿಸಿದರೆ ಭವಿಷ್ಯದಲ್ಲಿ ಆಪತ್ತು ನಿಶ್ಚಿತ. ಅಧಿಕಾರಕ್ಕಾಗಿ ಜಿಹಾದಿಗಳ ಜತೆ ಕೈಜೋಡಿಸಿರುವ ಸಿಪಿಎಂ, ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು. ರಾಜ್ಯದಲ್ಲಿ ಹಲವಾರು ಕೊಲೆಪ್ರಕರಣಗಳನ್ನು ಬುಡಮೇಲುಗೊಳಿಸಿರುವ ಸಿಪಿಎಂ ಇದಕ್ಕೆ ಉನ್ನತ ಪೊಲೀಸರನ್ನು ಬಳಸಿಕೊಳ್ಳುತ್ತಿದೆ. ಯುವಮೋರ್ಚಾ ನೇತಾರ ಕೆ.ಟಿ ಜಯಕೃಷ್ಣನ್ ಮಾಸ್ಟರ್ ಕೊಲೆಪ್ರಕರಣದ ಆರೋಪಿಯೊಬ್ಬ ಕೆಲವೊಂದು ರಹಸ್ಯ ಬಯಲುಪಡಿಸಲು ಮುಂದಾಗುತ್ತಿದ್ದಂತೆ ಈತನನ್ನು ನಿಗೂಢವಾಗಿ ಕೊಲೆ ನಡೆಸಲಾಗಿದೆ. ಫಸಲ್ ಕೊಲೆ ಪ್ರಕರಣವನ್ನು ಆರೆಸ್ಸೆಸ್ ಸಂಘಟನೆ ಮೇಲೆ ಹೊರಿಸಲೂ ಸಿಪಿಎಂ ನಡೆಸಿದ ಶ್ರಮವನ್ನು ಫಸಲ್ ಕುಟುಂಬ ಸದಸ್ಯರೇ ವಿಫಲಗೊಳಿಸಿದ್ದರು ಎಂದು ತಿಳಿಸಿದರು.

              ಯುವಮೋರ್ಚಾ ಜಿಲ್ಲಾ ಸಮಿತಿ ಅಧ್ಯಕ್ಷ ಧನಂಜಯ ಮಧೂರು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಶ್ರೀಕಾಂತ್, ಎ.ವೇಲಾಯುಧನ್, ಪ್ರಮಿಳಾ ಸಿ. ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಮೊದಲು ಕಾರ್ಯಕರ್ತರ ಬೃಹತ್ ಮೆರವಣಿಗೆ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries