ಉಪ್ಪಳ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್ ಹೊಳ್ಳ-ಸುಜಾತ ಹೊಳ್ಳ ದಂಪತಿಗಳ ಸುಪುತ್ರಿ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದಿಂದ ಸಸ್ಯರೋಗ ಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕದೊಂದಿಗೆ ಡಾಕ್ಟರೇಟ್ ಪದವಿ ಪುರಸ್ಕøತೆ ಕವನ ಶ್ರೀ ಹೊಳ್ಳ ಇವರನ್ನು ಬ್ಯಾಂಕಿನ ವತಿಯಿಂದ ಅವರ ಸ್ವಗೃಹದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬ್ಯಾಂಕಿನ ಅಧ್ಯಕ್ಷ ಪ್ರೇಮ್ ಕುಮಾರ್ ಐಲ, ಉಪಾಧ್ಯಕ್ಷ ಎಂ .ಪಿ. ಬಾಲಕೃಷ್ಣ ಶೆಟ್ಟಿ, ನಿರ್ದೇಶಕರಾದ ಭರತ್ ರೈ ಕೊಡಿಬೈಲು, ರವೀಶ ಕೊಡಂಗೆ, ಜಯಂತಿ ಟಿ ಶೆಟ್ಟಿ, ಮತ್ತು ರೇಖಾ, ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ, ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ಬಳ್ಳಾಲ್, ರಾಮಚಂದ್ರ ಮಯ್ಯ ತಿಂಬರ ಉಪಸ್ಥಿತರಿದ್ದರು.