ಕೊಚ್ಚಿ: ಕೇರಳದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಡಿಜಿಟಲ್ ಪಾವತಿ ವ್ಯವಸ್ಥೆಗೆ ತರಲು ಡಿಜಿಟಲ್ ಪಾವತಿ ವೇದಿಕೆಯಾದ ಅಸ್ಮಾನಿಯನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಅನುಮೋದಿಸಿದೆ.
ಈ ವಿಶೇಷ ಅಪ್ಲಿಕೇಶನ್ ನ್ನು ಕೊಚ್ಚಿ ಮೂಲದ Fintech ಸ್ಟಾರ್ಟಪ್ Asware Fintech ಅಭಿವೃದ್ಧಿಪಡಿಸಿದೆ.
ಬೀದಿ ವ್ಯಾಪಾರಿಗಳನ್ನು ಡಿಜಿಟಲ್ ಪಾವತಿ ವ್ಯವಸ್ಥೆಗೆ ತರಲು ಪ್ರಾರಂಭಿಸಿದ ಪಿಎಂ ಸ್ವಾನಿಧಿ ಯೋಜನೆಯಡಿ ವಿಶೇಷ ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ 50 ನಗರಗಳಲ್ಲಿ 93 ಶೇ. ಬೀದಿ ವ್ಯಾಪಾರಿಗಳನ್ನು ಡಿಜಿಟಲ್ ಪಾವತಿ ವ್ಯವಸ್ಥೆಗೆ ತರಲಾಗಿದೆ ಎಂದು ಅಸ್ಮಾನಿ ಹೇಳಿದೆ.