ಮಂಜೇಶ್ವರ: ಕೆ.ಎಸ್.ಬಿ.ಎ ವನಿತಾ ವಿಂಗ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಪರಿಸಿಯ ಅಕಾಡೆಮಿ ಆಫ್ ಮೇಕಪ್ ಬ್ಯೂಟಿ ಹೆಚ್.ಡಿ ಬೈಡಲ್ ವರ್ಕ್‍ಶಾಪ್ ಇದರ ತರಬೇತುದಾರರಾದ ಮರಿಯಮ್ ಆರ್ಟಿಸ್ಟ್ರಿ ಕೆ.ಹೆಚ್.ಡಿ.ಎ ಯು.ಎ.ಇ ಸರ್ಟಿಫೈಡ್ ಇವರಿಂದ 2 ದಿವಸಗಳ ತರಬೇತಿ ಪಡೆಯಲಾಯಿತು. ಕಾಸರಗೋಡು ಜಿಲ್ಲಾ ಬಾರ್ಬರ್ ಅಸೋಸಿಯೇಶನ್ ಅಧ್ಯಕ್ಷರಾದ ಸತ್ಯನಾರಾಯಣ ಕೆ.ಎಸ್.ಬಿ.ಎ ವನಿತಾ ವಿಂಗ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಶಮಾ ನಾಯರ್ ಕಾರ್ಯದರ್ಶಿ ಸುನೀತಾ ಕುಲಾಲ್ ಮತ್ತು ಸದಸ್ಯರುಗಳು ಉಪಸ್ಥಿತರಿದ್ದು ಸದಸ್ಯರುಗಳು ತರಗತಿಯ ಸದುಪಯೋಗವನ್ನು ಪಡೆದುಕೊಂಡರು. ನಂತರ ಪ್ರಮಾಣಪತ್ರ ವಿತರಿಸಲಾಯಿತು.