HEALTH TIPS

ಪೆರಿಯ ಅವಳಿ ಕೊಲೆ ಪ್ರಕರಣ: ಆರೋಪಿಗಳ ಪಟ್ಟಿಯಲ್ಲಿ ಮಾಜಿ ಶಾಸಕ ಕೆ.ವಿ.ಕುಂಞ ರಾಮನ್ ಸೇರ್ಪಡೆ: ಸರ್ಕಾರಕ್ಕೆ ಹಿನ್ನಡೆ

                 ಕೊಚ್ಚಿ: ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ ಕಾಸರಗೋಡು ಮಾಜಿ ಶಾಸಕ ಹಾಗೂ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಕುಂಞÂ್ಞ ರಾಮನ್ ವಿರುದ್ಧ ಪ್ರಕರಣ ದಾಖಲಾಗಿದೆ. ಕುಂಞÂ್ಞ ರಾಮನ್ ಸೇರಿದಂತೆ 10 ಹೊಸ ಆರೋಪಿಗಳನ್ನು ಸೇರಿಸಿರುವುದಾಗಿ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಹತ್ತು ಜನರಲ್ಲಿ ಐವರನ್ನು ಬಂಧಿಸಲಾಗಿದೆ. ಕೂಡಲೇ ಎಲ್ಲರನ್ನೂ ಬಂಧಿಸುವ ಅಗತ್ಯವಿಲ್ಲ ಎಂದು ಸಿಬಿಐ ಹೇಳಿದೆ. ಪ್ರಕರಣದಲ್ಲಿ ಕುಂಞÂ್ಞ ರಾಮನ್ 21ನೇ ಆರೋಪಿ. ಕನಾಯಲ್ ಬ್ಯಾಂಕ್ ಅಧ್ಯಕ್ಷ ಭಾಸ್ಕರನ್ ಪ್ರಕರಣದಲ್ಲಿ 22ನೇ ಆರೋಪಿಯಾಗಿದ್ದಾರೆ. ರಾಘವನ್ ವೇಲುತೋಳ್, ಗೋಪನ್ ವೆಲುತೋಳ್ ಮತ್ತು ಸಂದೀಪ್ ವೇಲುತೋಳ್ ಇತರ ಆರೋಪಿಗಳು.

                      ಪ್ರಕರಣದ ಆರಂಭದಿಂದಲೂ ಕಾಂಗ್ರೆಸ್ ಕುಂಞÂ್ಞ ರಾಮನ್  ಪಾತ್ರದ ಬಗ್ಗೆ ಆರೋಪ ಮಾಡಿತ್ತು. ಈ ಸಂಚಿನ ಸಂಬಂಧ ಸಿಬಿಐ ನಿನ್ನೆ ಐವರನ್ನು ಬಂಧಿಸಿತ್ತು. ಸಿಪಿಎಂ ಶಾಖೆಯ ಕಾರ್ಯದರ್ಶಿ ರಾಜೇಶ್ ಮತ್ತು ಸಹ ಆರೋಪಿಗಳಾದ ಸುರೇಂದ್ರನ್, ಶಾಸ್ತಾ ಮಧು, ಹರಿಪ್ರಸಾದ್, ರೆಜಿ ವರ್ಗೀಸ್ ಮತ್ತು ವಿಷ್ಣು ಸೂರ ಅವರನ್ನು ಬಂಧಿಸಲಾಗಿದೆ. ನ್ಯಾಯಾಲಯ ಅವರಿಗೆ ರಿಮಾಂಡ್ ನೀಡಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಹತ್ಯೆಗೆ ಸಂಚು ರೂಪಿಸಿದ ಆರೋಪವನ್ನು ಸಿಬಿಐ ಅವರ ವಿರುದ್ಧ ಹೊರಿಸಿದೆ.

             ಪೆರಿಯ ಅವಳಿ ಕೊಲೆಯಾದ ದಿನ ರಾಜೇಶ್ ಪಕ್ಷದ ಶಾಖಾ ಸಮಿತಿಯ ಉಸ್ತುವಾರಿ ವಹಿಸಿದ್ದರು. ಕ್ರೈಂ ಬ್ರಾಂಚ್ ತನಿಖಾ ವರದಿಯಲ್ಲೂ ಬ್ರಾಂಚ್ ಕಮಿಟಿ ಕಚೇರಿಯಲ್ಲಿ ಸಂಚು ನಡೆದಿದೆ ಎಂದು ಹೇಳಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಸುರೇಂದ್ರನ್ ಪ್ರಕರಣದ ಮೊದಲ ಆರೋಪಿ ಪೀತಾಂಬರನಿಗೆ ಕರೆ ಮಾಡಿದ್ದರು. ಬಳಿಕವಷ್ಟೇ ಕೆ.ವಿ.ಕುಂಞÂ್ಞ ರಾಮನ್ ಮತ್ತಿತರರ ಬಂಧನ ನಡೆಯಲಿದೆ ಎಂದು ಸಿಬಿಐ ಹೇಳಿಕೆ ನೀಡಿದೆ. ಆದರೆ, ಸಂಚಿನಲ್ಲಿ ಕುಂಞÂ್ಞ ರಾಮನ್ ನೇರವಾಗಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಸಿಬಿಐ ಹೇಳಿಲ್ಲ. ಆರೋಪಿಗಳಿಗೆ ನೆರವು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅದರ ಆಧಾರದ ಮೇಲೆ ಐವರನ್ನು ಫಾಲೋ ಅಪ್ ಆರೋಪಿಗಳನ್ನಾಗಿ ಸೇರಿಸಲಾಗಿದೆ.

               2019ರ ಫೆಬ್ರವರಿ 17 ರಂದು ಕಾಸರಗೋಡು ಪೆರಿಯ ಕಲ್ಯೋಟ್ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ (21) ಮತ್ತು ಶರತುಲಾಲ್ (24) ಅವರನ್ನು ವಿವಿಧ ವಾಹನಗಳಲ್ಲಿ ಬೈಕ್‍ಗಳನ್ನು ತಡೆದು ನಿಲ್ಲಿಸಿದ ಗುಂಪೆÇಂದು ಕಡಿದು ಹತ್ಯೆ ಮಾಡಿತ್ತು. ಕಳೆದ ವರ್ಷ ಆಗಸ್ಟ್‍ನಲ್ಲಿ ಹೈಕೋರ್ಟ್‍ನ ಏಕ ಪೀಠವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಆದೇಶವನ್ನು ಎತ್ತಿ ಹಿಡಿದಿತ್ತು. ನ್ಯಾಯಾಲಯದ ಆದೇಶವು ಸಿಬಿಐ ತನಿಖೆಗೆ ರಾಜ್ಯ ಸರ್ಕಾರದ ಮರುಪರಿಶೀಲನೆ ಬೇಡಿಕೆಯನ್ನು ತಿರಸ್ಕರಿಸಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries