ಮೊಹಾಲಿ: ಹಿರಿಯ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ರಾಜಕೀಯ ಪ್ರವೇಶಿಸಲಿದ್ದಾರೆ ಎಂದು ವರದಿಯಾಗಿದೆ. ಮುಂಬರುವ ಪಂಜಾಬ್ ಚುನಾವಣೆಗೆ ಮುನ್ನ ಹರ್ಭಜನ್ ಮತ್ತು ಯುವರಾಜ್ ಸಿಂಗ್ ಬಿಜೆಪಿ ಸೇರಲಿದ್ದಾರೆ ಎಂದು ಈ ಮುನ್ನ ವರದಿಯಾಗಿದ್ದರೂ, ಅದನ್ನು ಅವರು 'ಫೇಕ್ ನ್ಯೂಸ್' ಎಂದು ತಳ್ಳಿಹಾಕಿದ್ದರು.

ಇದೀಗ ಹರ್ಭಜನ್, ಪಂಜಾಬ್ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಜತೆಗೆ ಕಾಣಿಸಿಕೊಂಡಿರುವುದು ಮತ್ತೊಮ್ಮೆ ಅವರ ರಾಜಕೀಯ ಇನಿಂಗ್ಸ್‌ನ ಅನುಮಾನ ಹೆಚ್ಚಿಸಿದೆ. 'ಸಾಧ್ಯತೆಗಳೊಂದಿಗೆ ಚಿತ್ರ ಮೂಡಿಬಂದಿದೆ… ಶೈನಿಂಗ್ ಸ್ಟಾರ್ ಭಜ್ಜಿ ಜತೆಗೆ' ಎಂದು ಸಿಧು, ಹರ್ಭಜನ್ ಜತೆ ಪೋಸ್ ನೀಡಿರುವ ಚಿತ್ರವನ್ನು ಟ್ವೀಟಿಸಿದ್ದಾರೆ. ಪಂಜಾಬ್ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದ್ದು, ಹರ್ಭಜನ್ ಶೀಘ್ರದಲ್ಲೇ ಕಾಂಗ್ರೆಸ್‌ಗೆ ಸೇರಲಿದ್ದಾರೆ ಎನ್ನಲಾಗಿದೆ.
ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಇನ್ನಷ್ಟೇ ಅಧಿಕೃತ ವಿದಾಯ ಪ್ರಕಟಿಸಬೇಕಿರುವ 41 ವರ್ಷದ ಹರ್ಭಜನ್, ಐಪಿಎಲ್ ಫ್ರಾಂಚೈಸಿಯೊಂದಕ್ಕೆ ಮೆಂಟರ್ ಆಗಿ ಸೇರಿಕೊಳ್ಳುವ ಸಲುವಾಗಿ ಶೀಘ್ರ ನಿವೃತ್ತಿ ಘೋಷಿಸಲಿದ್ದಾರೆ ಎನ್ನಲಾಗಿದೆ.