ಕಾಸರಗೋಡು: ಜಿಲ್ಲೆಯಲ್ಲಿ ತೃತೀಯಲಿಂಗಿ ಸ್ನೇಹಿ ಆಸ್ಪತ್ರೆ ಸೌಲಭ್ಯಗಳನ್ನು ಖಾತ್ರಿಪಡಿಸುವ ಅಂಗವಾಗಿ ಆರೋಗ್ಯ ಕಾರ್ಯಕರ್ತರಿಗೆ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ) ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಉದ್ಘಾಟಿಸಿದರು. ರಿಜಿತ್ ಕೃಷ್ಣನ್, ರಾಷ್ಟ್ರೀಯ ಆರೋಗ್ಯ ಮಿಷನ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಡಾ. ಆಮಿನಾ ಟಿ.ಪಿ., ಜಿಲ್ಲಾ ಶಿಕ್ಷಣ ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಡತ್ತಿಲ್, ಜಿಲ್ಲಾ ನರ್ಸಿಂಗ್ ಅಧಿಕಾರಿ ಮೇರಿ ಎ. ಜೆ ಮಾತನಾಡಿದರು. ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಶೀಬಾ ಮುಮ್ತಾಜ್, ಜಿಲ್ಲಾ ಆಸ್ಪತ್ರೆಯ ಮನೋವೈದ್ಯ ಡಾ.ಶ್ರೀಜಿತ್ ಕೃಷ್ಣನ್, ಹೆಲ್ತ್ ಲೈನ್ ಸೇಫ್ಟಿ ಯೋಜನಾ ನಿರ್ದೇಶಕ ಮೋಹನನ್ ಮಾಂಗಾಡ್, ಇಶಾ ಕಿಶೋರ್, ಶಂಸೀನಾ ಮತ್ತು ಲಾವಣ್ಯ ಅವರು ತೃತೀಯಲಿಂಗಿ ಸಮುದಾಯ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಮಾತನಾಡಿದರು. ಉಪ ಜಿಲ್ಲಾ ಶಿಕ್ಷಣ ಮಾಧ್ಯಮ ಅಧಿಕಾರಿ ಸಯನಾ ಎಸ್ ಮತ್ತು ಮಹೇಶಕುಮಾರ ಪಿ.ವಿ. ಕಮಲ್ ಕೆ ಜೋಸ್ ನೇತೃತ್ವ ವಹಿಸಿದ್ದರು. ರಾಷ್ಟ್ರೀಯ ಆರೋಗ್ಯ ಮಿಷನ್ ಕಾನ್ಫರೆನ್ಸ್ ಹಾಲ್‍ನಲ್ಲಿ ನಡೆದ ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಆರೋಗ್ಯ ಸಂಸ್ಥೆಗಳ ನಸಿರ್ಂಗ್ ಅಧಿಕಾರಿಗಳು, ಆರೋಗ್ಯ ಕೇರಳ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಮತ್ತು ಹದಿಹರೆಯದವರ ಆರೋಗ್ಯ ಕೌನ್ಸಿಲರ್‍ಗಳು ಭಾಗವಹಿಸಿದ್ದರು.