ತಿರುವನಂತಪುರ; ಅನಿವಾಸಿ ಭಾರತೀಯರ ಹೂಡಿಕೆಗೆ ಸಂಬಂಧಿಸಿದ ಕಾನೂನು ಬದಲಾವಣೆ ಮೂಲಕ ಮೋದಿ ಸರ್ಕಾರ ದೇಶದಲ್ಲಿ ದೊಡ್ಡ ಬದಲಾವಣೆ ತಂದಿದೆ ಎಂದು ಪ್ರಮುಖ ಉದ್ಯಮಿ ಹಾಗೂ ಲುಲು ಸಮೂಹದ ಸಿಎಂಡಿ ಎಂ.ಎಂ.ಯೂಸುಫಾಲಿ ಹೇಳಿದ್ದಾರೆ. ಎಲ್ಲಾ ರಾಜ್ಯಗಳಲ್ಲೂ ಉದ್ಯಮ ಸ್ನೇಹಿಯಾಗಲು ವಿಭಿನ್ನ ಮಾರ್ಗಗಳನ್ನು ಅಳವಡಿಸಿಕೊಂಡಿವೆ. ಅದಕ್ಕಾಗಿಯೇ ತಾನು ಭಾರತದ ವಿವಿಧೆಡೆ ಮತ್ತು ಕೇರಳದಲ್ಲಿ ಉದ್ಯಮಗಳನ್ನು ಪ್ರಾರಂಭಿಸುತ್ತಿರುವೆ ಎಂದು ಅವರು ಹೇಳಿದರು. ತಿರುವನಂತಪುರಂನಲ್ಲಿ ಲುಲು ಮಾಲ್ ಉದ್ಘಾಟನೆ ಸಮಾರಂಭದ ಪೂರ್ವಭಾವಿಯಾಗಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು ಈ ಮಾಹಿತಿ ನೀಡಿದರು.
ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ಲುಲು ಮಾಲ್ ನ್ನು ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ. ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಅಧ್ಯಕ್ಷತೆ ವಹಿಸುವರು. ಸಂಸದ ವಿ.ಮುರಳೀಧರನ್, ಸಂಸದ ಶಶಿ ತರೂರ್, ವಿರೋಧ ಪಕ್ಷದ ಉಪನಾಯಕ ಪಿ.ಕೆ.ಕುನ್ಹಾಲಿಕುಟ್ಟಿ ಸೇರಿದಂತೆ ಗಲ್ಫ್ ರಾಷ್ಟ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಲುಲು ಮಾಲ್ ನ್ನು 20 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ 2000 ಕೋಟಿ ರೂಪಾಯಿ ಬಂಡವಾಳದಲ್ಲಿ ನಿರ್ಮಿಸಲಾಗಿದೆ. ಟೆಕ್ನೋಪಾರ್ಕ್ ಸನಿಹ ಮಾಲ್ ಇದೆ. 15,000 ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ಸಿಗಲಿದೆ. ಇದರಲ್ಲಿ ಜಿಲ್ಲೆಯ ಸುಮಾರು 600 ಮಂದಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 100ಕ್ಕೂ ಹೆಚ್ಚು ಮಂದಿ ಮಾಲ್ ಇರುವ ಐದು ಕಿ.ಮೀ ವ್ಯಾಪ್ತಿಯಲ್ಲಿದ್ದಾರೆ. ಎರಡು ವರ್ಷಗಳ ಕಾಲ ಲುಲು ಮಾಲ್‍ನ ಕಾರ್ಯಚಟುವಟಿಕೆಗಳು ಅಸ್ತವ್ಯಸ್ತಗೊಂಡಿದ್ದವು. ನಿರ್ಮಾಣ ವಿಳಂಬದಿಂದಾಗಿ ಮೊದಲು ಯೋಜಿಸಿದ್ದಕ್ಕಿಂತ ಹೆಚ್ಚುವರಿ 220 ಕೋಟಿ ರೂ. ಬೇಕಾಗಿ ಬಂದಿತು.