ಗುರುಗ್ರಾಮ: ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡ ಹಿಂದೂಗಳು ಕೂಡಲೇ ಮರು ಮತಾಂತರಗೊಂಡು ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಹಿಂದೂ ಸಂಘಟನೆಯೊಂದು ಮನವಿ ಮಾಡಿದೆ.
ಹರ್ಯಾಣದ ಗುರುಗ್ರಾಮದಲ್ಲಿ ನಡೆದ ಬಹಿರಂಗ ಸಾಮೂಹಿಕ ಮುಸ್ಲಿಂ ಪ್ರಾರ್ಥನೆಗೆ ಅಡ್ಡಿಪಡ್ಡಿಸಿದ ಸಂಯುಕ್ತ ಸಂಘರ್ಷ ಸಮಿತಿಯು ಮತಾಂತರಿತ ಮುಸ್ಲಿಮರು ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡು ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಹೇಳಿದೆ.
ಸಂಯುಕ್ತ ಸಂಘರ್ಷ ಸಮಿತಿಯು ಸುಮಾರು 32 ಹಿಂದೂ ಪರ ಸಂಘಟನೆಗಳನ್ನು ಹೊಂದಿರುವ ಒಕ್ಕೂಟವಾಗಿದ್ದು, ಈ ಸಂಯುಕ್ತ ಸಂಘರ್ಷ ಸಮಿತಿಯ ಅಧ್ಯಕ್ಷ ಮಹಾವೀರ್ ಭಾರದ್ವಾಜ್ ಅವರು ಮತಾಂತರಿತ ಮುಸ್ಲಿಮರು ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡು ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
'ಹರ್ಯಾಣದ ಬಹುಪಾಲು ಮುಸ್ಲಿಮರ ಪೂರ್ವಜರು ಹಿಂದೂ ಸಮುದಾಯಕ್ಕೆ ಸೇರಿದವರು. ಹೀಗಾಗಿ ಅವರು ಮರು ಮತಾಂತರಗೊಂಡು ಹಿಂಧೂ ಧರ್ಮಕ್ಕೆ ವಾಪಸ್ ಆಗಿ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು. ನಾವು ಇಲ್ಲಿನ ಲೀಸರ್ ವ್ಯಾಲಿಯಲ್ಲಿ ಸಾಮೂಹಿಕ 'ಘರ್ ವಾಪ್ಸಿ' ಕಾರ್ಯಕ್ರಮ ಆಯೋಜಿಸುತ್ತೇವೆ. ಆ ಮೂಲಕ ಅವರು ತಮ್ಮ ಪೂರ್ವಜರ ಧರ್ಮಕ್ಕೆ ಹಿಂದುರುಗಬಹುದು. ನಾವು ಅವರನ್ನು ಮುಕ್ತವಾಗಿ ಮತ್ತು ಆತ್ಮೀಯವಾಗಿ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಹರ್ಯಾಣದಲ್ಲಿ ಕೆಲ ಹಿಂದೂಪರ ಸಂಘಟನೆಗಳು ಮುಸ್ಲಿಮರು ತೆರೆದ ಜಾಗದಲ್ಲಿ "ನಮಾಜ್" ನೀಡುವುದನ್ನು ವಿರೋಧಿಸಿತ್ತಿದ್ದು, ಮುಸ್ಲಿಮರು ಶುಕ್ರವಾರದ ಪ್ರಾರ್ಥನೆಗೆ ಅಡ್ಡಿಪಡಿಸಲು ಅವರು "ಭಾರತ್ ಮಾತಾ ಕಿ ಜೈ" ಮತ್ತು "ಜೈ ಶ್ರೀ ರಾಮ್" ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದರಿಂದ ಹಲವು ಬಾರಿ ಸಮಸ್ಯೆಗಳು ಎದುರಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.