ಕುಂಬಳೆ: ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತಿಯ ಕಂಬಾರು ಶ್ಮಶಾನ ಭೂಮಿ ಪರಿಶಿಷ್ಟ ಜಾತಿಯವರಿಗೆ ಬಿಟ್ಟು ಕೊಡಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಭಾರತೀಯ ಜನತಾ ಎಸ್ ಸಿ ಮೋರ್ಚಾ ಮೊಗ್ರಾಲ್ ಪುತ್ತೂರು ಪಂಚಾಯತಿ ಸಮಿತಿ ನೇತೃತ್ವದಲ್ಲಿ ಪಂಚಾಯತಿ ಕಚೇರಿಗೆ ಮಾರ್ಚ್ ನಡೆಸಲಾಯಿತು.
ಗ್ರಾಮ ಪಂಚಾಯತಿ ಆಸ್ತಿ ದಾಖಲೆಯಲ್ಲಿ ಈ ಶ್ಮಶಾನವನ್ನು ಬಳಸಲಾಗಿದೆ. ಕೆಲವು ವರ್ಷಗಳ ಹಿಂದೆ ಅಲ್ಲಿ ಪರಿಶಿಷ್ಟ ಜಾತಿ ವಿಭಾಗದ ಮೃತದೇಹವನ್ನು ಸಂಸ್ಕರಣೆಗೆ ಒಳಪಡಿಸಿದಾಗ ತಡೆದು ನಿಲ್ಲಿಸಲಾಗಿದೆ ಎಂದು ಕಾಲನಿ ನಿವಾಸಿಗಳು ಆರೋಪಿಸುತ್ತಾರೆ. ಅಂದಿನಿಂದ ಜನರು ಪಂಚಾಯತಿಯಲ್ಲಿ ದೂರು ನೀಡುತ್ತಾ ಬಂದಿದ್ದಾರೆ. ಶ್ಮಶಾನ ಒತ್ತುವರಿ ಬಂದಿರುವ ಭೂಮಾಫಿಯಗಳಿಗೆ ಅನುಕೂಲ ನಿರ್ಧಾರವನ್ನು ಪಂಚಾಯತಿ ತೆಗೆದುಕೊಳ್ಳುತ್ತಿದೆ. ಒಂದುವಿಭಾಗದ ಜನರ ಸಂಸ್ಕøತಿಯ ಮೂಲಭೂತ ಅವಶ್ಯಕತೆಯಿರುವ ಶ್ಮಶಾನವನ್ನು ಸುತ್ತು ಗೋಡೆ ಕಟ್ಟಿ ಸಂರಕ್ಷಿಸಿ ಜನರಿಗೆ ಬಿಟ್ಟುಕೊಡಬೇಕು ಎಂಬ ಬೇಡಿಕೆಯನ್ನು ಮಂಡಿಸಿ ಮುಂದಿನ ದಿನಗಳಲ್ಲಿ ಪ್ರಬಲವಾದ ಹೋರಾಟದ ಕಾರ್ಯಕ್ರಮಗಳೊಂದಿಗೆ ಭಾರತೀಯ ಜನತಾ ಪಕ್ಷವು ಚಳವಳಿ ನಡೆಸಲಿದೆ ಎಂದು ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ ಕೆ ಕಯ್ಯಾರ್ ತಿಳಿಸಿದರು.
ಎಸ್‍ಸಿ ಮೋರ್ಚಾ ಜಿಲ್ಲಾ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷೆ ಪ್ರಮೀಳ ಮಜಲ್, ಎಸ್‍ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ.ಪಿ ಪೆರಡಾಲ, ಎಸ್‍ಸಿ ಮೋರ್ಚಾ ಬದಿಯಡ್ಕ ಮಂಡಲ ಅಧ್ಯಕ್ಷ ಸುರೇಶ್, ಬಿಜೆಪಿ ಮೊಗ್ರಾಲ್ ಪುತ್ತೂರು ಪಂಚಾಯಿತಿ ಸಮಿತಿ ಅಧ್ಯಕ್ಷ ಯೋಗೇಶ್, ಕಾರ್ಯದರ್ಶಿ ಚಂದ್ರಶೇಖರ, ಗಣೇಶ್ ನಾಯಕ್, ಪಂಚಾಯಿತಿ ಸದಸ್ಯ ಮಲ್ಲ, ಸುಲೋಚನ, ಗಿರೀಶ್ ಅವರು ಮಾತನಾಡಿದರು.