ಮುಳ್ಳೇರಿಯ: ಮುಳಿಯಾರ್ ಸಮುದಾಯ ಆರೋಗ್ಯ ಕೇಂದ್ರ(ಸಿಎಚ್ ಸಿ)ದಲ್ಲಿ ಡಯಾಲಿಸಿಸ್ ಘಟಕ 'ಕರುತಲ್' ಕಾರ್ಯಾರಂಭ ಮಾಡಿದೆ. ಶಾಸಕ ಸಿ.ಎಚ್.ಕುಂಞಂಬು ಉದ್ಘಾಟಿಸಿದರು. ಎಂಡೋಸಲ್ಫಾನ್ ಸಂತ್ರಸ್ತರು ಮತ್ತು ರೈತರು ಹೆಚ್ಚಾಗಿ ವಾಸಿಸುವ ಕಾರಡ್ಕ ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ಏಳು ಪಂಚಾಯಿತಿಗಳಲ್ಲಿ ಕಿಡ್ನಿ ರೋಗಿಗಳಿಗೆ ಉಚಿತ ಮತ್ತು ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಬ್ಲಾಕ್ ಪಂಚಾಯಿತಿ ಆಡಳಿತ ಮಂಡಳಿಯು ಮುಳಿಯಾರ ಸಿಎಚ್ ಸಿಯಲ್ಲಿ ಡಯಾಲಿಸಿಸ್ ಘಟಕ ಸ್ಥಾಪಿಸಿದೆ. ಮಾಜಿ ಶಾಸಕ ಕೆ.ಕುಂಞÂ್ಞ ರಾಮನ್ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ 50 ಲಕ್ಷ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಿಂದ 52 ಲಕ್ಷ ಮತ್ತು ಕಾರಡ್ಕ ಬ್ಲಾಕ್ ಪಂಚಾಯಿತಿಯಿಂದ 45 ಲಕ್ಷ ರೂ.ಗಳ ಅನುದಾನದಲ್ಲಿ ಘಟಕವನ್ನು ಸ್ಥಾಪಿಸಲಾಗಿದೆ.
ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಬಿ ಶಫೀಕ್, ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ. ರಮಣಿ, ಕಾರಡ್ಕ ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಸವಿತಾ, ಬಿ.ಕೆ.ನಾರಾಯಣನ್, ಸ್ಮಿತಾ ಪ್ರಿಯರಂಜನ್, ಬ್ಲಾಕ್ ಪಂಚಾಯತಿ ಸದಸ್ಯರಾದ ಎಂ.ಕುಂಞಂಬು ನಂಬಿಯಾರ್, ಎನ್. ಯಶೋದಾ ಹಾಗೂ ಮುಳಿಯಾರ್ ಪಂಚಾಯತಿ ಅಧ್ಯಕ್ಷ ಪಿ.ವಿ ಮಿನಿ, ದೇಲಂಪಾಡಿ ಪಂಚಾಯತಿ ಅಧ್ಯಕ್ಷೆ ನ್ಯಾಯವಾದಿ. ಉಷಾ, ಕಾರಡ್ಕÀ ಪಂಚಾಯಿತಿ ಅಧ್ಯಕ್ಷೆ ವಕೀಲ ಕೆ.ಗೋಪಾಲ ಕೃಷ್ಣ, ವೈದ್ಯಾಧಿಕಾರಿ ಡಾ. ರೇಖಾ ಎಸ್, ಅಶೋಕ್ ಕುಮಾರ್ ಕೋಡೋತ್, ಎ.ಕೆ.ಹರಿದಾಸ್ ಮಾತನಾಡಿದರು.