HEALTH TIPS

ಮಿಶನರೀಸ್‌ ಆಫ್‌ ಚಾರಿಟಿಯ ಬ್ಯಾಂಕ್‌ ಖಾತೆಗಳನ್ನು ತಡೆಹಿಡಿಯುವಂತೆ ಅವರೇ ಕೋರಿಕೊಂಡಿದ್ದರು: ಕೇಂದ್ರ ಸ್ಪಷ್ಟನೆ

            ಕೋಲ್ಕತಾ: ಮದರ್ ಥೆರೆಸಾರ ಮಿಶನರೀಸ್ ಆಫ್ ಚಾರಿಟಿ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಕ್ರಿಸ್ಮಸ್ ದಿನವಾದ ಶನಿವಾರ ಸ್ತಂಭನಗೊಳಿಸಲಾಗಿದೆ ಎಂಬ ವರದಿಗಳ ಬಗ್ಗೆ ಸೋಮವಾರ ಆಘಾತವನ್ನು ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಕಾನೂನು ಅತ್ಯುಚ್ಚವಾಗಿದ್ದರೂ ಅದಕ್ಕಾಗಿ ಮಾನವೀಯ ಪ್ರಯತ್ನಗಳೊಂದಿಗೆ ರಾಜಿ ಮಾಡಿಕೊಳ್ಳಬಾರದು ಎಂದು ಟ್ವೀಟಿಸಿದ್ದರು.

        ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸಿದ್ದಕ್ಕಾಗಿ ಕೇಂದ್ರದ ವಿರುದ್ಧ ದಾಳಿ ನಡೆಸಿರುವ ಅವರು,ಇದರಿಂದಾಗಿ ಚ್ಯಾರಿಟಿಯಲ್ಲಿನ 22,000 ರೋಗಿಗಳು ಮತ್ತು ಸಿಬ್ಬಂದಿಗಳು ಆಹಾರ ಮತ್ತು ಔಷಧಿಗಳಿಲ್ಲದೆ ಪರದಾಡುವಂತಾಗಿದೆ ಎಂದು ಹೇಳಿದ್ದರು.

          ಇದರ ಬೆನ್ನಿಗೇ ಹೇಳಿಕೆಯೊಂದನ್ನು ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯವು,ವಿದೇಶಿ ದೇಣಿಗೆಗಳ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) 2010 ಮತ್ತು ವಿದೇಶಿ ಸದೇಣಿಗೆಗಳ ನಿಯಂತ್ರಣ ನಿಯಮಗಳು,2011ರಡಿ ಅರ್ಹತಾ ಷರತ್ತುಗಳನ್ನು ಪೂರೈಸದಿದ್ದಕ್ಕಾಗಿ ಕಾಯ್ದೆಯಡಿ ನೋಂದಣಿ ನವೀಕರಣಕ್ಕಾಗಿ ಚ್ಯಾರಿಟಿಯು ಸಲ್ಲಿಸಿದ್ದ ಅರ್ಜಿಯು ಡಿ.25ರಂದು ತಿರಸ್ಕೃತಗೊಂಡಿದೆ ಮತ್ತು ತನ್ನ ಖಾತೆಗಳನ್ನು ಸ್ತಂಭನಗೊಳಿಸುವಂತೆ ಚ್ಯಾರಿಟಿಯೇ ಕೊರಿಕೆಯನ್ನು ಸಲ್ಲಿಸಿತ್ತು ಎಂದು ಎಸ್ಬಿಐ ತನಗೆ ಮಾಹಿತಿ ನೀಡಿದೆ ಎಂದು ತಿಳಿಸಿದೆ.

          ನವೀಕರಣಕ್ಕೆ ನಿರಾಕರಣೆಯನ್ನು ಪುನರ್ಪರಿಶೀಲಿಸುವಂತೆ ಕೋರಿ ಚ್ಯಾರಿಟಿಯು ಅರ್ಜಿಯನ್ನು ಸಲ್ಲಿಸಿಲ್ಲ ಎಂದೂ ಅದು ಹೇಳಿದೆ.

          ಎಫ್‌ಸಿಆರ್‌ಎ ಅಡಿ ಮಿಶನರೀಸ್ ಆಫ್ ಚ್ಯಾರಿಟಿಯ ನೋಂದಣಿಯು 2021,ಅ.31ವರೆಗೆ ಸಿಂಧುತ್ವವನ್ನು ಹೊಂದಿತ್ತು. ಬಳಿಕ ನವೀಕರಣ ಅರ್ಜಿಗಳು ಬಾಕಿಯಿರುವ ಎಫ್‌ಸಿಆರ್‌ಎ ಅಡಿಯ ಇತರ ಸಂಸ್ಥೆಗಳೊಂದಿಗೆ ಚ್ಯಾರಿಟಿಯ ಸಿಂಧುತ್ವವನ್ನೂ 2021,ಡಿ.31ರವರೆಗೆ ವಿಸ್ತರಿಸಲಾಗಿತ್ತು. ಚ್ಯಾರಿಟಿಯ ನವೀಕರಣ ಅರ್ಜಿಯ ಪರಿಶೀಲನೆ ವೇಳೆ ಕೆಲವು ವ್ಯತಿರಿಕ್ತ ಮಾಹಿತಿಗಳು ಗಮನಕ್ಕೆ ಬಂದಿದ್ದವು ಎಂದು ಗೃಹಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

           ಆದರೆ,ಗುಜರಾತಿನಲ್ಲಿರುವ ಚ್ಯಾರಿಟಿಯ ಆಶ್ರಯಧಾಮದಲ್ಲಿಯ ಬಾಲಕಿಯರನ್ನು ಶಿಲುಬೆಯನ್ನು ಧರಿಸುವಂತೆ ಮತ್ತು ಬೈಬಲ್ ಅನ್ನು ಪಠಣ ಮಾಡುವಂತೆ ಸಂಸ್ಥೆಯು ಬಲವಂತಗೊಳಿಸಿತ್ತೇ ಎಂಬ ಬಗ್ಗೆ ಅಲ್ಲಿಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸುದ್ದಿಸಂಸ್ಥೆ ಎಎಫ್‌ಪಿ ಕಳೆದ ತಿಂಗಳು ವರದಿ ಮಾಡಿತ್ತು. ಮಕ್ಕಳ ಕಲ್ಯಾಣ ಅಧಿಕಾರಿಗಳ ವರದಿಯನ್ನು ಆಧರಿಸಿ ತಾನು ಈ ಬಗ್ಗೆ ದೂರು ಸಲ್ಲಿಸಿದ್ದಾಗಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಯಾಂಕ್ ತ್ರಿವೇದಿ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದರು. ಮಿಶನರೀಸ್ ಆಫ್ ಚ್ಯಾರಿಟಿ ಈ ಆರೋಪವನ್ನು ನಿರಾಕರಿಸಿತ್ತು.

ಕಲಕತ್ತಾ ಆರ್ಚ್ ಡಯಾಸಿಸ್ನ ವಿಕಾರ್ ಜನರಲ್ ಫಾ.ಡೊಮಿನಿಕ್ ಗೋಮ್ಸ್ ಅವರು,ಕ್ರೈಸ್ತ ಸಮುದಾಯದ ಮೇಲೆ ಇನ್ನಷ್ಟು ಭಯಂಕರ ದಾಳಿ ನಡೆದಿದೆ. ಮತಾಂತರ ಆರೋಪವು ಅಪ್ಪಟ ಸುಳ್ಳಾಗಿದೆ ಎಂದಿದ್ದಾರೆ.

         'ಮಿಶನರೀಸ್ ಆಫ್ ಚ್ಯಾರಿಟಿಯ ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸುವ ಮೂಲಕ ಸರಕಾರಿ ಏಜೆನ್ಸಿಗಳು ಕಡುಬಡವರಿಗೆ ಕ್ರೂರ ಕ್ರಿಸ್ಮಸ್ ಉಡುಗೊರೆಯನ್ನು ನೀಡಿವೆ. ಚ್ಯಾರಿಟಿಯ ಭಗಿನಿಯರು ಮತ್ತು ಸೋದರರು ಮಾತ್ರ ಯಾರೂ ಸಮೀಪಕ್ಕೂ ಬಿಟ್ಟುಕೊಳ್ಳದ ಕುಷ್ಠರೋಗಿಗಳು ಮತ್ತು ಸಾಮಾಜಿಕ ಬಹಿಷ್ಕೃತರ ಏಕೈಕ ಸ್ನೇಹಿತರಾಗಿದ್ದಾರೆ. ಕ್ರೈಸ್ತ ಸಮುದಾಯ ಮತ್ತು ಅವರ ಸಾಮಾಜಿಕ ತಲುಪುವಿಕೆಯ ಮೇಲಿನ ಈ ದಾಳಿಯು ಭಾರತದ ಕಡುಬಡವರ ಮೇಲಿನ ಭೀಕರ ದಾಳಿಯಾಗಿದೆ. ಸರಕಾರದ ಈ ಕ್ರಮವನ್ನು ನಾವು ಖಂಡಿಸುತ್ತೇವೆ ಮತ್ತು ಈ ನಿರ್ಧಾರವು ಉಂಟು ಮಾಡುವ ಮಾವೀಯ ವಿಪತ್ತನ್ನು ಪರಿಗಣಿಸುವಲ್ಲಿ ಸಹಾನುಭೂತಿಯ ಕೊರತೆಯು ನಮ್ಮನ್ನು ದಿಗಿಲುಗೊಳಿಸಿದೆ ' ಎಂದು ಫಾ.ಗೋಮ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

            ಮತಾಂತರ ಆರೋಪಗಳ ಕುರಿತಂತೆ ಅವರು,ಇಂತಹ ಆರೋಪಗಳು ಮನಸ್ಸನ್ನು ತಲ್ಲಣಗೊಳಿಸುತ್ತವೆ. ಕ್ರೈಸ್ತ ಸಂಸ್ಥೆಗಳು ಮತಾಂತರದ ಉದ್ದೇಶವನ್ನು ಹೊಂದಿದ್ದರೆ ಇಂದಿನ ಕೇವಲ ಶೇ.2.3ರ ಬದಲಿಗೆ ಭಾರತದಲ್ಲಿ ಕ್ರೈಸ್ತ ಧರ್ಮವು ಕಾಲಿಟ್ಟ ಈ ಎರಡು ಸಾವಿರ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತರ ಜನಸಂಖ್ಯೆಯಿರುತ್ತಿತ್ತು ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries