ಕಾಸರಗೋಡು: ಜಿಲ್ಲಾ ಆಡಳಿತ ವ್ಯವಸ್ಥೆ ಹಾಗೂ ಮಹಿಳಾ ಕಲ್ಯಾಣ ಕಚೇರಿಯ ವಿಧವಾ ಸಂರಕ್ಷಣಾ ಯೋಜನೆಯನ್ವಯ ಸಂಗಾತಿಯ ಆಯ್ಕೆಗಾಗಿ ವಿಧವೆಯರನ್ನು ವಿವಾಹವಾಗುವ ನಿಟ್ಟಿನಲ್ಲಿ ಡಿ. 31ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬಿಳಿ ಹಾಳೆಯಲ್ಲಿ ಸ್ವ ವಿವರ ಹಾಗೂ ಆರು ತಿಂಗಳ ಇತ್ತೀಚಿನ ಭಾವಚಿತ್ರ ಹಾಗೂ ಸಂಬಂಧಪಟ್ಟ ದಾಖಲೆಗಳೊಂದಿಗೆ ಮಹಿಳಾ ಕಲ್ಯಾಣ ಇಲಾಖೆ ಕಚೇರಿಗೆ ಖುದ್ದಾಗಿ ಅಥವಾ www.koottu.in ಎಂಬ ವಎಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿಲ್ಲ ಎಂಬ ಬಗ್ಗೆ ಆಯಾ ಠಾಣೆಗಳಿಂದ ಠಾಣಾಧಿಕಾರಿಯ ದೃಢೀಕರಣ ಪತ್ರ, ಮಾರಕ ಕಾಯಿಲೆಗಳಿಲ್ಲದಿವರುವ ಬಗ್ಗೆ ಸರ್ಕಾರಿ ವೈದ್ಯಾಧಿಕಾರಿಯಿಂದ ಸರ್ಟಿಫಿಕೇಟ್, ಅರ್ಜಿದಾರನ ಗುಣಸ್ವಭಾವ, ಸಾಮಾಜಿಕ-ಆರ್ಥಿಕ ಹಿನ್ನೆಲೆ ಬಗ್ಗೆ ಆಯಾ ಸ್ಥಳೀಯಾಡಳಿತ ಸಂಸ್ಥೆ ಸದಸ್ಯನ ದೃಢೀಕರಣ ಪತ್ರ ಲಗತ್ತಿಸಬೇಕಾಗಿದೆ. ಜತೆಗೆ ವಿವಾಹ ವಿಚ್ಛೇದನದ ಬಗ್ಗೆ ನ್ಯಾಯಾಲಯ ವ್ಯಾಜ್ಯಗಳಿದ್ದಲ್ಲಿ ಈ ಬಗ್ಗೆ ಮಾಹಿತಿಯನ್ನೂ ನೀಡಬೇಕಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ(04994 255266 ,04994 256266 ,9446270127)ಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.