ಮಧೂರು: ಕಾಸರೋಡು ಡಯಟ್ ನಿಂದ 2019-21 ನೇ ವರ್ಷದಲ್ಲಿ ಡಿಪೆÇ್ಲೀಮಾ ಇನ್ ಎಜುಕೇಶನ್ (ಡಿ.ಎಡ್)ಪೂರ್ತಿಗೊಳಿಸಿದವರಿಗಾಗಿ ಪÀದವಿ ಪ್ರದಾನ ಸಮಾರಭವನ್ನು ಏರ್ಪಡಿಸಲಾಗಿತ್ತು. ಮಲಯಾಳ, ಕನ್ನಡ ಮಾಧ್ಯಮಗಳಲ್ಲಿ ಅಧ್ಯಯನವನ್ನು ಪೂರ್ತಿಗೊಳಿಸಿ ಅಧ್ಯಾಪಕರಾಗಲು ಅರ್ಹತೆಯನ್ನು ಗಳಿಸಿದ 75 ನವ ಅಧ್ಯಾಪಕ ಅಧ್ಯಾಪಿಕೆಯರಿಗೆ ಡಿಪೆÇ್ಲೀಮಾ ಪ್ರದಾನ ಮಾಡಲಾಯಿತು.
ಕಣ್ಣೂರು ವಿಶ್ವವಿದ್ಯಾಲಯದ ಮಾಜಿ ಪರೀಕ್ಷಾ ನಿಯಂತ್ರಕ ಪ್ರೊ. ಕೆ ವಿ ಜಯರಾಜನ್ ಮುಖ್ಯಭಾಷಣ ಮಾಡಿ 'ಡಿಪೆÇ್ಲೀಮಾ ಇನ್ ಎಲಿಮೆಂಟರಿ ಎಜುಕೇಶನ್' ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಡಯೆಟ್ ಪ್ರಾಂಶುಪಾಲ ಡಾ. ಎಂ. ಬಾಲನ್ ಅಧ್ಯಕ್ಷತೆ ವಹಿಸಿದ್ದರು. ಡಯೆಟ್ ಹಿರಿಯ ಪ್ರಾಧ್ಯಾಪಕ ಡಾ. ಕೆ. ರಘುರಾಮ ಭಟ್ ಸ್ವಾಗತಿಸಿ ಸೇವಾ ಪೂರ್ವ ಅಧ್ಯಾಪಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಎ ಗಿರೀಶ್ ಬಾಬು ವಂದಿಸಿದರು.