ನವದೆಹಲಿ: ಕೇಂದ್ರ ಐಟಿ ಮಾಹಿತಿ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ದೇಶದಲ್ಲಿ ಇಂಟೆಲ್, ಟಿಎಸ್ಸೆಂಸಿ, ಸ್ಯಾಮ್ಸಂಗ್ ಥರದ ದೈತ್ಯ ಸೆಮಿಕಂಡಕ್ಟರ್ ಕಂಪನಿಗಳು ಹೂಡಿಕೆ ನಡೆಸುವುದನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
ಭಾರತ ಸೆಮಿಕಂಡಕ್ಟರ್ ಕೊರತೆಯನ್ನು ಎದುರಿಸುತ್ತಿದ್ದು ಅದರಿಂದಾಗಿ ಆಟೊಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ.
ಸರ್ಕಾರ ಇತ್ತೀಚಿಗಷ್ಟೆ 76,000 ಕೋಟಿ ರೂ. ಮೌಲ್ಯದ ಸೆಮಿಕಂಡಕ್ಟರ್ ಸ್ಕೀಮ್ ಅನ್ನು ಘೋಷಿಸಿತ್ತು. ಅದರ ನಂತರ ಸೆಮಿಕಂಡಕ್ಟರ್ ತಯಾರಕ ಸಂಸ್ಥೆಗಳು ಭಾರತದಲ್ಲಿ ಹೂಡಿಕೆ ನಡೆಸಲು ಉತ್ಸುಕತೆ ತೋರಿವೆ ಎಂದು ರಾಜೀವ್ ಚಂದ್ರಶೇಖರ್ ಅಭಿಪ್ರಾಯ ಪಟ್ಟಿದ್ದಾರೆ.