ಕಾಸರಗೋಡು: ಕಾಸರಗೋಡು ಸರ್ಕಾರಿ ಕಾಲೇಜಿನ ಎನ್‍ಎಸ್‍ಎಸ್ ಸ್ವಯಂಸೇವಕರು ಕಲೆಕ್ಟರೇಟ್ ಆವರಣವನ್ನು ಸ್ವಚ್ಛಗೊಳಿಸಿದರು. ಏಳು ದಿನಗಳ ಶಿಬಿರದ ಭಾಗವಾಗಿ ಸ್ವಚ್ಛತಾ ಕಾರ್ಯ ನಡೆದಿದೆ. ಕಲೆಕ್ಟರೇಟ್ ಸುತ್ತಮುತ್ತಲು ಬೆಳೆದಿದ್ದ ಕಾಡು-ಪೊದೆಗಳ ನಿವಾರಣೆ, ಇತರ ಕಾಗದದ ತ್ಯಾಜ್ಯವನ್ನು ಸಂಗ್ರಹಿಸುವಲ್ಲಿ ನಿರತರಾಗಿದ್ದರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಪ್ರೊ.ಆಸಿಫ್ ಇಕ್ಬಾಲ್ ಕಕ್ಕಶ್ಶೇರಿ ಹಾಗೂ ಪ್ರೊ.ಎಸ್.ಎಸ್. ಸುಜಾತಾ ಅವರ ನೇತೃತ್ವದಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮುಂದಿನ ಸೋಮವಾರವೂ ಸ್ವಚ್ಛತಾ ಕಾರ್ಯ ಮುಂದುವರಿಯಲಿದೆ.ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸ್ವಯಂಸೇವಕರನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಶ್ಲಾಘಿಸಿದರು.
ಕಾಲೇಜಿನ ಎನ್‍ಎಸ್‍ಎಸ್ ಘಟಕಗಳ ಕಾರ್ಯದರ್ಶಿ ಎಂ.ಲತೀಶ್ ಮತ್ತು ವಿ.ಎಸ್. ಅಭಿಜಿತ್, ಎಸ್. ಶ್ರೇಯಸ್, ವಿ.ಎಸ್.ಸೇತುಲಕ್ಷ್ಮಿ, ಟಿ.ಚಿತ್ರಾ, ಕೆ. ಅದಿರಾ ಸೇರಿದಂತೆ ನೂರಾರು ಮಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಡಿ.23ರಂದು ಆರಂಭವಾದ ಎನ್ ಎಸ್ ಎಸ್ ಸ್ವಯಂಸೇವಕರ ಶಿಬಿರ ಡಿಸೆಂಬರ್ 29ರವರೆಗೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಎನ್.ಎಸ್.ಎಸ್ ಸಾಮಾಜಿಕ ಮಹತ್ವದ ವಿವಿಧ ಕಾರ್ಯಕ್ರಮಗಳನ್ನು ನಡೆಸಲಿದೆ.