ಕಾಸರಗೋಡು: ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಜಾಮಿಅ-ಸಅದಿಯ ಅರೆಬಿಯ ಕಾಲೇಜಿನ ಪದವಿ ಪ್ರದಾನ ಸಮಾರಂಭ ಡಿ. 4ರಂದು ದೇಳಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಸಂಸ್ಮರಣೆ, ನೂರುಲ್ ಉಲಮಾ ಸ್ಮಾರಕ ಕಟ್ಟಡದ ಶಿಲಾನ್ಯಾಸ ಸಮಾರಂಭ ನಡೆಯಲಿರುವುದಾಗಿ ಸ್ವಾಗತಸಮಿತಿ ಅಧ್ಯಕ್ಷ ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಡಿ. 4ರಂದು ಬೆಳಗ್ಗೆ 6ರಿಂದ ಪದವಿಪ್ರದಾನ ಸಮಾರಂಭ ಆರಂಭಗೊಳ್ಳಲಿದ್ದು, 10ಕ್ಕೆ ಕಾಂತಾಪುರ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸುವರು. ಸಅದಿಯಾ ಉಪಾಧ್ಯಕ್ಷ ಕೆ.ವಿ ಅಬೂಬಕ್ಕರ್ ಮುಸ್ಲಿಯಾರ್ ಪಟ್ಟುವತ್ತಿಲ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಪ್ರಮುಖ ವಾಗ್ಮಿಗಳು ಪಾಲ್ಗೊಳ್ಳುವರು. ಸಂಜೆ 5ಕ್ಕೆ ನಡೆಯುವ ಸಮಾರಂಭದಲ್ಲಿ ಪದವಿ ಪೂರೈಸಿದ 540ಮಂದಿ ವಿದ್ಯಾರ್ಥಿಗಳಿಗೆ ಕುಂಬೋಳ್ ತಙಳ್ ಪದವಿ ಪ್ರದಾನ ನಡೆಸುವರು. ಸಮಸ್ತ ಅಧ್ಯಕ್ಷ ಇ.ಸುಲೈಮಾನ್ ಮುಸ್ಲಿಯಾರ್ ಸಮಾರಂಭ ಉದ್ಘಾಟಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಯ್ಯದ್ ಸೈನುಲ್ ಅಬಿದಿನ್ ಅಲ್ ಅಹದಲ್ ಕಣ್ಣಾವಂ, ಬಿ.ಎಸ್. ಅಬ್ದುಲ್ಲ ಕುಞÂ ಫೈಸಿ, ಕೊಲ್ಲಂಬಾಡಿ ಅಬ್ದುಲ್ ಖಾದಿರ್ ಸಅದಿ, ಎಂ.ಎ ಅಬ್ದುಲ್ ವಹಾಬ್‍ಮ ಸಿ.ಎಲ್ ಹಮೀದ್ ಉಪಸ್ಥಿತರಿದ್ದರು.