ತಿರುವನಂತಪುರಂ: ವ್ಯೆದ್ಯಕೀಯ ಪಿಜಿ ವಿದ್ಯಾರ್ಥಿ ಪ್ರತಿನಿಧಿಗಳು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರನ್ನು ಇಂದು ಭೇಟಿ ಮಾಡಿದರು. ನಡೆದದ್ದು ಸೌಹಾರ್ದಯುತ ಮಾತುಕತೆಯಾಗಿದ್ದು, ಈ ಸಭೆಯ ಆಧಾರದ ಮೇಲೆ ಪಿಜಿ ವೈದ್ಯರೊಂದಿಗೆ ಔಪಚಾರಿಕ ಚರ್ಚೆ ನಡೆಸುವುದಾಗಿ ವೈದ್ಯರು ತಿಳಿಸಿದ್ದಾರೆ.
ಆದಷ್ಟು ಬೇಗ ಅಧಿಕೃತ ಚರ್ಚೆ ನಡೆಯಬೇಕೆಂಬುದು ಸಾರ್ವಜನಿಕರ ಆಗ್ರಹವೂ ಆಗಿದೆ. ಶೀಘ್ರದಲ್ಲೇ ಈ ಪ್ರಕರಣವನ್ನು ಚರ್ಚೆಗೆ ಕರೆಯುವ ಭರವಸೆ ಇದೆ. ಮಾತುಕತೆಯಲ್ಲಿ ಬೇಡಿಕೆಗಳು ಅಂಗೀಕಾರವಾದರೆ ಮುಷ್ಕರ ಹಿಂಪಡೆಯಲಾಗುವುದು. ಇಲ್ಲದಿದ್ದಲ್ಲಿ ಮುಷ್ಕರ ಮುಂದುವರಿಸುವ ನಿರ್ಧಾರ ಕೈಗೊಳ್ಳುವುದಾಗಿ ಪ್ರತಿನಿಧಿಗಳು ಸ್ಪಷ್ಟಪಡಿಸಿದರು.
ಮುಷ್ಕರದ ಕುರಿತು ಚರ್ಚಿಸಿದ ಪಿಜಿ ಅಸೋಸಿಯೇಷನ್ ಮುಖಂಡರು, ಆರೋಗ್ಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆರೋಗ್ಯ ಶಿಕ್ಷಣ ಇಲಾಖೆ ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರು ಚರ್ಚೆಗೆ ಹಾಜರಾಗಲಿದ್ದು, ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ವ್ಯೆದ್ಯರು ತಿಳಿಸಿದ್ದಾರೆ.
ಕೊರೋನಾ ಅವಧಿಯ ಕಾರಣದಿಂದಾಗಿ ವೈದ್ಯರಿಗೆ ಹೆಚ್ಚುವರಿ ಕೆಲಸವು ಭಾರವಾಗುತ್ತಿದೆ. ಬದಲಾಗಿ ವೈದ್ಯರ ನೇಮಕಾತಿ ಅಥವಾ ಪಿಜಿ ದಾಖಲಾತಿ ಹಾಗೂ ಪಿಜಿ ವೈದ್ಯರಿಗೆ ನೀಡುವ ಸ್ಟೈಫಂಡ್ ಹೆಚ್ಚಳಕ್ಕೆ ಪಿಜಿ ವೈದ್ಯರು ಒತ್ತಾಯಿಸುತ್ತಿದ್ದಾರೆ.