ನಿಖಿಲ್ ಅವರು ಕ್ಯಾಲಿಫೋರ್ನಿಯ ವಿವಿಯಲ್ಲಿ ಗಣಿತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿಖಿಲ್ ಅವರ ಜೊತೆ ಇಬ್ಬರು ಅಮೆರಿಕನ್ ಗಣಿತಜ್ಞರನ್ನೂ ಗೌರವಿಸಲಾಗುತ್ತಿದೆ. 'ಕ್ಯಾಡಿಸನ್ ಸಿಂಗರ್ ಪ್ರಾಬ್ಲೆಂ' ಎನ್ನುವ ಗಣಿತ ಸಮಸ್ಯೆಯನ್ನು ನಿಖಿಲ್ ಬಗೆಹರಿಸಿದ್ದರು.
ಐತಿಹಾಸಿಕ ಗಣಿತ ಸಮಸ್ಯೆಯನ್ನು ಬಿಡಿಸಿದ ಭಾರತ ಮೂಲದ ಮೇಧಾವಿಗೆ ಉನ್ನತ ಪ್ರಶಸ್ತಿ: ನಿಖಿಲ್ ಶ್ರೀವಾಸ್ತವ ಸಾಧನೆ
0
ಡಿಸೆಂಬರ್ 05, 2021
ವಾಷಿಂಗ್ಟನ್: ಐತಿಹಾಸಿಕ ಗಣಿತ ಸಮಸ್ಯೆಯನ್ನು ಬಗೆಹರಿಸಿದ ಭಾರತ ಮೂಲದ ಅಮೆರಿಕನ್ ಗಣಿತಜ್ಞ ನಿಖಿಲ್ ಶ್ರೀವಾಸ್ತವವರಿಗೆ ಸಿಪ್ರಿಯನ್ ಫೊಯಾಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಮೆರಿಕನ್ ಮ್ಯಾಥಮ್ಯಾಟಿಕಲ್ ಸೊಸೈಟಿ ನಿಖಿಲ್ ಅವರಿಗೆ ನೀಡುತ್ತಿರುವ ಪ್ರಶಸ್ತಿ 5,000 ಡಾಲರ್ ಬಹುಮಾನವನ್ನು ಒಳಗೊಂಡಿದೆ.
Tags