ನವದೆಹಲಿ: ನೀತಿ ಆಯೋಗದ ನೂತನ ಆರೋಗ್ಯ ಸೌಕರ್ಯ ನಿರ್ವಹಣಾ ಪಟ್ಟಿಯಲ್ಲಿ ಕೇರಳ ರಾಜ್ಯ ಅಗ್ರ ಸ್ಥಾನದಲ್ಲಿದ್ದು, ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ ದಕ್ಕಿದೆ.
ನೀತಿ ಆಯೋಗ ಬಿಡುಗಡೆ ಮಾಡಿದ ನಾಲ್ಕನೇ ಆರೋಗ್ಯ ಸೂಚ್ಯಂಕದ ಪ್ರಕಾರ, ದೊಡ್ಡ ರಾಜ್ಯಗಳಲ್ಲಿ ಒಟ್ಟಾರೆ ಆರೋಗ್ಯ ಕಾರ್ಯಕ್ಷಮತೆಯ ವಿಷಯದಲ್ಲಿ ಕೇರಳ ಮತ್ತೆ ಅಗ್ರ ಶ್ರೇಯಾಂಕದ ರಾಜ್ಯವಾಗಿ ಹೊರಹೊಮ್ಮಿದೆ. ಆದರೆ ಉತ್ತರ ಪ್ರದೇಶವು ಅತ್ಯಂತ ಕೆಟ್ಟ ಪ್ರದರ್ಶಕ ರಾಜ್ಯವಾಗಿದೆ.
ನಾಲ್ಕನೇ ಸುತ್ತಿನ ಆರೋಗ್ಯ ಸೂಚ್ಯಂಕವು 2019-20 (ಉಲ್ಲೇಖ ವರ್ಷ) ಅವಧಿಯನ್ನು ಗಣನೆಗೆ ತೆಗೆದುಕೊಂಡಿದ್ದು, ಉತ್ತಮ ಆರೋಗ್ಯದ ಮಾನದಂಡಗಳಲ್ಲಿ ತಮಿಳುನಾಡು ಮತ್ತು ತೆಲಂಗಾಣ ಕ್ರಮವಾಗಿ ಎರಡು ಮತ್ತು ಮೂರನೇ ಅತ್ಯುತ್ತಮ ಪ್ರದರ್ಶಕ ರಾಜ್ಯಗಳಾಗಿ ಹೊರಹೊಮ್ಮಿವೆ ಎಂದು ಸರ್ಕಾರದ ಚಿಂತಕರ ಚಾವಡಿಯ ವರದಿ ಹೇಳಿದೆ.
ಆದಾಗ್ಯೂ, ಮೂಲ ವರ್ಷದಿಂದ (2018-19) ಉಲ್ಲೇಖ ವರ್ಷಕ್ಕೆ (2019-20) ಅತ್ಯಧಿಕ ಹೆಚ್ಚುತ್ತಿರುವ ಬದಲಾವಣೆಯನ್ನು ದಾಖಲಿಸುವ ಮೂಲಕ ಉತ್ತರ ಪ್ರದೇಶವು ಹೆಚ್ಚುತ್ತಿರುವ ಕಾರ್ಯಕ್ಷಮತೆಯ ವಿಷಯದಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ವರದಿ ಸೇರಿಸಲಾಗಿದೆ.
ಸಣ್ಣ ರಾಜ್ಯಗಳ ಪೈಕಿ, ಮಿಜೋರಾಂ ಒಟ್ಟಾರೆ ಕಾರ್ಯಕ್ಷಮತೆ ಮತ್ತು ಹೆಚ್ಚುತ್ತಿರುವ ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮ ಪ್ರದರ್ಶಕ ರಾಜ್ಯಗಳಾಗಿ ಹೊರಹೊಮ್ಮಿದೆ. ಆದರೆ ಕೇಂದ್ರಾಡಳಿತ ಪ್ರದೇಶಗಳಲ್ಲಿ, ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರಗಳು ಒಟ್ಟಾರೆ ಕಾರ್ಯಕ್ಷಮತೆಯ ವಿಷಯದಲ್ಲಿ ಕೆಳಭಾಗದಲ್ಲಿ ಸ್ಥಾನ ಪಡೆದಿವೆ. ಆದರೆ ಹೆಚ್ಚುತ್ತಿರುವ ಕಾರ್ಯಕ್ಷಮತೆಯ ವಿಷಯದಲ್ಲಿ ಪ್ರಮುಖ ಪ್ರದರ್ಶನಕ ರಾಜ್ಯಗಳಾಗಿ ಉಭಯ ರಾಜ್ಯಗಳು ಹೊರಹೊಮ್ಮಿವೆ.
ವಿಶ್ವಬ್ಯಾಂಕ್‌ನ ತಾಂತ್ರಿಕ ನೆರವಿನೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದೊಂದಿಗೆ ಈ ವರದಿಯನ್ನು ಸಿದ್ಧಪಡಿಸಲಾಗಿದೆ.