ಕಾಸರಗೋಡು: ಕೇರಳದ 14ಜಿಲ್ಲೆಗಳಲ್ಲಿ ಪರ್ಯಟನೆ ಪೂರ್ತಿಗೊಳಿಸಿದ ಕೇರಳ ಗ್ರ್ಯಾಂಡ್ ಸೈಕಲ್ ಟೂರ್ ಬೇಕಲ ಕೋಟೆಯಲ್ಲಿ ಸಮಾರೋಪಗೊಂಡಿತು. ರಾಜ್ಯ ಪ್ರವಾಸೋದ್ಯಮ ಖಾತೆ ಸಚಿವ ಮಹಮ್ಮದ್ ರಿಯಾಸ್ ಡಿ. 4ರಂದು ತಿರುವನಂತಪುರದಿಂದ ಸೈಕಲ್ ಟೂರ್‍ಗೆ ಹಸಿರುನಿಶಾನಿ ತೋರಿಸುವ ಮೂಲಕ ಉದ್ಘಾಟಿಸಿದ್ದರು.
ಹನ್ನೊಂದು ಮಂದಿಯ ತಂಡ ಹತ್ತು ದಿವಸಗಳ ಕಾಲ ರಾಜ್ಯಾದ್ಯಂತ 1200ಕಿ.ಮೀ ದೂರ ಕ್ರಮಿಸಿ ಬೇಕಲ ತಲುಪಿದೆ. ಜಿಲ್ಲಾ ಟೂರಿಸಂ ಪ್ರಮೋಶನ್ ಕೌನ್ಸಿಲ್ ವತಿಯಿಂದ ನಡೆದ ಸಮಾರೋಪ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಡಿ.ಎಸ್. ಮೇಘಶ್ರೀ ರ್ಯಾಲಿ ಬರಮಾಡಿಕೊಂಡರು. ಡಿಟಿಪಿಸಿ ಕಾರ್ಯದರ್ಶಿ ಲಿಜೋ ಜೋಸೆಫ್, ಬಿಆರ್‍ಡಿಸಿ ಪ್ರಬಂಧಕ ಯು.ಎಸ್. ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.