ಬದಿಯಡ್ಕ: ಕಾಸರಗೋಡು ಬ್ಲಾ.ಪಂ.ಸದಸ್ಯೆಯೋರ್ವೆಗೆ ಭಯೋತ್ಪಾದನೆ ಹಾಗೂ ಲೌವ್ ಜಿಹಾದ್ ಬೆಂಬಲಿಸುವ ರೀತಿಯಲ್ಲಿ 3 ಕರಪತ್ರಗಳನ್ನು ಮನೆಯ ಅಂಚೆ ವಿಳಾಸಕ್ಕೆ ಕಳಿಸಿರುವುದು ಲಭಿಸಿದೆ. ಕರಪತ್ರಗಳನ್ನು ಬ್ಲಾ.ಪಂ.ಸದಸ್ಯೆ ಬದಿಯಡ್ಕ ಪೋಲೀಸರಿಗೆ ಹಸ್ತಾಂತರಿಸಿದ್ದಾರೆ. ಪೋಲೀಸರು ಪ್ರಕರಣ ದಾಖಲಿಸಿ ತನಿಖೆಗೆ ಚಾಲನೆ ನೀಡಿದ್ದಾರೆ.
ಕಾಸರಗೋಡು ಬ್ಲಾಕ್ ಪಂಚಾಯತಿ ಪೆರಡಾಲ ವಿಭಾಗದ ಸದಸ್ಯೆ ಬಿಜೆಪಿ ಪ್ರತಿನಿಧಿ ಕೆ.ಎಂ.ಅಶ್ವಿನಿ ಅವರಿಗೆ ಈ ಕರಪತ್ರಗಳು ಬಂದಿವೆ.
ಸ್ಟ್ರೈಟ್ ಫಾರ್ ಖುರಾನ್ ಎಜ್ಯುಕೇಶನ್. ಪಿ.ಬಿ.ಸಂಖ್ಯೆ 58., ಮಂಜೇರಿ ಮಲಪ್ಪುರಂ ಎಂಬ ವಿಳಾಸದಿಂದ ಅಶ್ವಿನಿ ಅವರ ವಿಳಾಸಕ್ಕೆ ಕರಪತ್ರಗಳು ಬಂದಿವೆ. ತಮಿಳು, ಮಲೆಯಾಳಂ ಹಾಗೂ ಆಂಗ್ಲ ಭಾಷೆಗಲಲ್ಲಿರುವ ಕರಪತ್ರಗಳು ಲಭಿಸಿದೆ. ಈ ಪೈಕಿ ಒಂದು ಪುಸ್ತಕದ ಹೊರಗೆ "ಭೂಮಿ ತಿರುಗುವುದನ್ನು ಹೇಗೆ ನಿಲ್ಲಿಸಬಹುದು" ಎಂದು ಮಲೆಯಾಳಂ, ಅರೆಬಿಕ್ ಹಾಗೂ ಮಲೆಯಾಳಂ ನಲ್ಲಿ ಮುದ್ರಿಸಲಾ|ಗಿದೆ. ಮುಹಿಯುದ್ದೀನ್ ಮುಹಮ್ಮದ್ ಇರುಂಬುಯಿ ಎಂಬ ಹೆಸರು ಕೂಡಾ ಮುದ್ರಣಗೊಂಡಿದೆ. ತಮ್ಮ ಖಾಸಗೀ ವಿಳಾಸ ಮಂಜೇರಿಗೆ ಹೇಗೆ ತಲಪಿತು ಎಮದು ಅಶ್ವಿನಿ ಅಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದಕ ತಂಡ ಇದರ ಹಿಂದಿರಬಹುದಾಗಿದೆಯೇ ಎಂದು ಶಂಕಿಸಲಾಗಿದೆ.
ಇದರ ಬೆನ್ನಿಗೇ ಮಾಯಿಪ್ಪಾಡಿ ಕುದ್ರಪ್ಪಾಡಿಯ ವಿಭಾಗದ ಬ್ಲಾ.ಪಂ. ಸದಸ್ಯ ಸುಕುಮಾರ ಕುದ್ರೆಪ್ಪಾಡಿ ಅವರಿಗೂ ಇಂತಹದೇ ಪತ್ರ ಲಭಿಸಿದೆ ಎಂದು ತಿಳಿದುಬಂದಿದೆ.