HEALTH TIPS

ಯುನೆಸ್ಕೋದ 'ಅಮೂರ್ತ ಸಾಂಸ್ಕೃತಿಕ ಪರಂಪರೆ' ಪಟ್ಟಿಗೆ ಕೋಲ್ಕತ್ತಾ ದುರ್ಗಾ ಪೂಜೆ ಸೇರ್ಪಡೆ: ಹೆಮ್ಮೆಯ ವಿಷಯ ಎಂದ ಮೋದಿ

            ಕೊಲ್ಕತ್ತಾ: ಪಶ್ಚಿಮಬಂಗಾಳದಲ್ಲಿ ಆಚರಿಸುವ ದುರ್ಗಾ ಪೂಜೆಯನ್ನು 'ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ' ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಯುನೆಸ್ಕೋ ಪ್ರಕಟಿಸಿದೆ.


            ಡಿ. 13ರಿಂದ 18ರವರೆಗೆ ಆನ್‌ಲೈನ್‌ನಲ್ಲಿ ನಡೆದ ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಇಂಟರ್‌ಗವರ್ನಮೆಂಟಲ್ ಕಮಿಟಿಯ ವಾರ್ಷಿಕ ಸಮಾವೇಶದ ಹದಿನಾರನೇ ಅಧಿವೇಶನದಲ್ಲಿ, ದುರ್ಗಾ ಪೂಜೆಯನ್ನು ಪಟ್ಟಿಯಲ್ಲಿ ಸೇರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

             ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಈ ವಿಷಯ ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಹೆಮ್ಮೆ ಮತ್ತು ಸಂತೋಷದ ವಿಷಯ ಎಂದು ಬಣ್ಣಿಸಿದರು.

         ದುರ್ಗಾ ಪೂಜೆಯು ನಮ್ಮ ಸಂಪ್ರದಾಯ ಮತ್ತು ನೀತಿಗಳಲ್ಲಿ ಅತ್ಯುತ್ತಮವಾದುದನ್ನು ಎತ್ತಿ ತೋರಿಸುತ್ತದೆ. ಕೊಲ್ಕತ್ತಾದಲ್ಲಿ ನಡೆಯುವ ದುರ್ಗಾಪೂಜೆಯನ್ನು ಪ್ರತಿಯೊಬ್ಬರೂ ನೋಡಿ ಕಣ್ತುಂಬಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

       ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ(ಯುನೆಸ್ಕೋ) ಪತ್ರಿಕಾ ಪ್ರಕಟಣೆಯಲ್ಲಿ, ದುರ್ಗಾ ಪೂಜೆ ಹಬ್ಬವು ಹೆಣ್ಣು ಮನೆಗೆ ಬರುವುದನ್ನು ಸೂಚಿಸುತ್ತದೆ. ಧರ್ಮ ಮತ್ತು ಕಲೆಯ ಸಾರ್ವಜನಿಕ ಪ್ರದರ್ಶನದ ಅತ್ಯುತ್ತಮ ನಿದರ್ಶನವಾಗಿ ದುರ್ಗಾ ಪೂಜೆಯನ್ನು ನೋಡಲಾಗುತ್ತದೆ. ಸಹ ಕಲಾವಿದರು ಮತ್ತು ವಿನ್ಯಾಸಕಾರರಿಗೆ ಅಭಿವೃದ್ಧಿ ಹೊಂದುತ್ತಿರುವ ನೆಲವಾಗಿದೆ ಎಂದು UNESCO ಹೇಳಿದೆ.

             ದುರ್ಗಾ ಪೂಜೆಯನ್ನು ದೇಶದ ವಿವಿಧ ಭಾಗಗಳಲ್ಲಿ ಆಚರಿಸಲಾಗುತ್ತದೆ, ಆದರೆ ವಿಶೇಷವಾಗಿ ಕೊಲ್ಕತ್ತಾದಲ್ಲಿ ಆಚರಿಸಲಾಗುತ್ತದೆ. ಇದು ದುರ್ಗಾ ದೇವಿಯ ಹತ್ತು ದಿನಗಳ ಆರಾಧನೆಯನ್ನು ಸೂಚಿಸುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries