HEALTH TIPS

ಪ್ರಿಕಾಷನ್ ಡೋಸ್‌ ಎಂದರೇನು? ಬೂಸ್ಟರ್‌ ಶಾಟ್‌ಗಿಂತ ಹೇಗೆ ಭಿನ್ನವಾಗಿದೆ?

             ದೇಶದಲ್ಲಿ ಮತ್ತೆ ಕೊರೊನಾ ಆತಂಕ ಎದುರಾಗಿದೆ, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು ಡಿಸೆಂಬರ್‌ 24ರಂದು ಪ್ರಧಾನಿ ಮೋದಿ 15-18 ವರ್ಷದವರಿಗೆ ಲಸಿಕೆ ನಿಡಲಾಗುವುದು ಎಂದು ಘೋಷಿಸಿದ್ದಾರೆ, ಅದರ ಜೊತೆಗೆ ಆರೋಗ್ಯ ಕಾರ್ಯಕರ್ತರಿಗೆ ಮತ್ತೊಂದು ಲಸಿಕೆ ನೀಡುವುದರ ಬಗ್ಗೆ ಹೇಳಿದ್ದು ಅದನ್ನು ಪ್ರಿಕಾಷನ್‌ ಡೋಸ್ (ಕೊರೊನಾ ತಡೆಗಟ್ಟುವ ಡೋಸ್) ಎಂದು ಕರೆಯಲಾಗಿದೆ.

                2 ಡೋಸ್‌ ಲಸಿಕೆ ಪಡೆದ ಬಳಿಕ ಕೆಲವ ಕಡೆ ವಿಶ್ವದ ಹಲವು ಕಡೆ ಬೂಸ್ಟರ್ ನೀಡಲಾಗುತ್ತಿದೆ, ಆದರೆ ಪ್ರಧಾನಿ ಮೋದಿ ಬೂಸ್ಟರ್ ನೀಡಲಾಗುವುದು ಎಂದು ಹೇಳಿಲ್ಲ, ಬದಲಿಗೆ ಪ್ರಿಕಾಷನ್ ಡೋಸ್‌ (precaution dose) ನೀಡಲಾಗುವುದು ಎಂದು ಹೇಳಿದ್ದಾರೆ, ಈ ಪ್ರಿಕಾಷನ್ ಡೋಸ್ ಎಂದರೇನು? ಕೊರೊನಾ ತಡೆಗಟ್ಟುವಲ್ಲಿ ಇದು ಹೇಗೆ ಸಹಕಾರಿ ಎಂದು ನೋಡೋಣ ಬನ್ನಿ:
            ಪ್ರಿಕಾಷನ್‌ ಡೋಸ್ ಎಂದರೇನು? ಇದುವರೆಗೆ ಪ್ರಿಕಾಷನ್‌ ಡೋಸ್‌ ಕುರಿತ ಯಾವುದೇ ವ್ಯಾಖ್ಯಾನಗಳಿಲ್ಲ. ಕೋವಿಡ್‌ ಲಸಿಕೆ ಟೆಕ್ನಿಕಲ್ ಸಲಹೆ ತಂಡ ಕೋವಿಡ್ 3ನೇ ಲಸಿಕೆಯನ್ನು ಯಾರಿಗೆ ನೀಡಲಾಗುವುದು ಎಂಬುವುದರ ಕುರಿತು ತಿಳಿಸಿದೆ. ಭಾರತದಲ್ಲಿ ಕೋವಿಡ್‌ 2ನೇ ಡೋಸ್‌ ಪಡೆದು 6 ತಿಂಗಳು ಕಳೆದವರಿಗೆ ಪ್ರಿಕಾಷನ್ ಡೋಸ್‌ ನೀಡಲಾಗುವುದು ಎಂದು ಹೇಳಿದೆ. ಏಕೆಂದರೆ ಕೋವಿಡ್‌ ಲಸಿಕೆ ಪಡೆದು ತುಂಬಾ ಸಮಯವಾಗಿದ್ದರೆ ಅದರ ಸಾಮರ್ಥ್ಯ ಕುಗ್ಗಿರಬಹುದು, ಅವರಲ್ಲಿ ಮತ್ತೆ ರೋಗ ನಿರೋಧಕ ಶಕ್ತಿ ವೃದ್ಧಿಸಲು ಈ ಪ್ರಿಕಾಷನ್ ಡೋಸ್‌ ನೀಡಲಾಗುವುದು.
           ಈ ಡೋಸ್‌ ಯಾರಿಗೆಲ್ಲಾ ಲಭ್ಯವಿದೆ? ಈ ಪ್ರಿಕಾಷನ್ ಡೋಸ್‌ ಫ್ರಂಟ್‌ಲೈನ್‌ ವರ್ಕರ್ಸ್‌ ಹಾಗೂ ಆರೋಗ್ಯ ಕಾರ್ಯಕರ್ತರ ಆತ್ಮವಿಶ್ವಾಸ ಹೆಚ್ಚಿಸುವುದು. ಈ ಡೋಸ್‌ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೂ ಸಿಗಲಿಎ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರ ವೈದ್ಯರ ಸಲಹೆ ಮೇರೆಗೆ ಜನವರಿ 10, 2022ರಿಂದ ಪಡೆಯಬಹುದಾಗಿದೆ.
          ಬೂಸ್ಟರ್ ಸಾಟ್ ಎಂದರೇನು? ಬೂಸ್ಟರ್‌ ಶಾಟ್ ಎಂಬುವುದು ಕೋವಿಡ್ ಲಸಿಕೆ ಕಾರ್ಯಕ್ರಮದ ಒಂದು ಭಾಗವಾಗಿದೆ. ಎರಡು ಡೋಸ್‌ ಲಸಿಕೆ ಪಡೆದ ಬಳಿಕ ಮತ್ತೊಂದು ಎಕ್ಸ್‌ಟ್ರಾ ಡೋಸ್‌ ನೀಡಲಾಗುವುದು. ಬೂಸ್ಟರ್‌ ಶಾಟ್‌ಗೆ U.S. Centers for Disease Control and Prevention ಸಲಹೆಯನ್ನು ನೀಡಿದ್ದು, ಫೈಜರ್ ಅಥವಾ ಮಾಡರ್ನಾ 2ನೇ ಡೋಸ್‌ ಲಸಿಕೆ ಪಡೆದು 28 ದಿನಗಳ ಬಳಿಕ ಬೂಸ್ಟರ್ ಶಾಟ್‌ ಪಡೆಯಬಹುದು.
           ಪ್ರಿಕಾಷನ್ ಡೋಸ್‌ ಅವಶ್ಯಕ ಏಕೆ? ಕೋವಿಡ್‌ ಲಸಿಕೆಯಿಂದ ಪಡೆದ ರೋಗ ನಿರೋಧಕ ಶಕ್ತಿ ಎಷ್ಟು ಸಮಯ ನಮ್ಮ ದೇಹದಲ್ಲಿ ಉಳಿಯುತ್ತದೆ ಎಂಬುವುದು ನಿಖರವಾಗಿ ಹೇಳಲು ಇದುವರೆಗೆ ಸಾಧ್ಯವಾಗಿಲ್ಲ, ಇದರ ಕುರಿತು ಅನೇಕ ಅಧ್ಯಯನಗಳು ನಡೆಯುತ್ತಿವೆ, ಕೆಲವರಲ್ಲಿ ಲಸಿಕೆ ಪಡೆದ 3 ತಿಂಗಳಿಗೆ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ. ಭಾರತದಲ್ಲಿ ಇದೀಗ 3ನೇ ಅಲೆಯ ಸಾಧ್ಯತೆ ಇರುವುದರಿಂದ ಈ ಪ್ರಿಕಾಷನ್ ಡೋಸ್‌ ಪಡೆಯುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. 6 ತಿಂಗಳಿಗಿಂತ ಮೊದಲು ಕೋವಿಡ್ 2ನೇ ಡೋಸ್‌ ಪಡೆದವರಿಗೆ ಈ ಪ್ರಿಕಾಷನ್ ಡೋಸ್ ಸಿಗುವುದು, ಕೋವಿಡ್‌ ಲಸಿಕೆ ಪಡೆದ ಉಳಿದವರಿಗೆ ಕೊರೊನಾ ವಿರುದ್ಧ ರೋಗ ನಿರೋಧಕ ಸಾಮರ್ಥ್ಯ ಇರುತ್ತದೆ, ಹೀಗಾಗಿ ಕೋವಿಡ್ 19 ಅಲೆಯನ್ನು ತಡೆಗಟ್ಟಬಹುದು ಎಂದು ಅಂದಾಜಿಸಲಾಗಿದೆ. 



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries