ಬದಿಯಡ್ಕ: ಪಶುಸಂಗೋಪನಾ ಸಚಿವೆ ಜೆ.ಚಿಂಚು ರಾಣಿ ಅವರು ಬೇಳದಲ್ಲಿರುವ ಕುಬ್ಜ ತಳಿ ಹಸು ಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿದರು. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಮ್ಯ ಮಹೇಶ್, ವಾರ್ಡ್ ಸದಸ್ಯೆ ಅನಸೂಯ, ಪಶುಸಂಗೋಪನಾ ಇಲಾಖೆ ಜಂಟಿ ನಿರ್ದೇಶಕ ಡಾ.ನಾಗರಾಜ ಪಿ, ಉಪನಿರ್ದೇಶಕ ಡಾ.ಸುನೀಲ್ ಜಿ.ಎಂ., ಕಷಿ ಅಧಿಕಾರಿ ಡಾ.ರಾಮ್ ಮೋಹನ್ ಶೆಟ್ಟಿ, ಮುಖ್ಯ ಪಶುವೈದ್ಯಾಧಿಕಾರಿ ಡಾ.ಮುರಳೀಧರನ್, ಬದಿಯಡ್ಕ ಪಶುವೈದ್ಯಾಧಿಕಾರಿ ಡಾ.ಇ.ಚಂದ್ರಬಾಬು ಮತ್ತಿತರರು ಸಚಿವರ ಜೊತೆಗಿದ್ದರು.
ಬದಿಯಡ್ಕ ಪಂಚಾಯತಿ ವ್ಯಾಪ್ತಿಯ 5.35 ಎಕರೆ ಜಮೀನಿನಲ್ಲಿ ಕಾಸರಗೋಡಿನ ಕುಳ್ಳ ತಳಿಗೆ ಸೇರಿದ 156 ಹಸುಗಳೂ, 39 ಹೋರಿಗಳೂ ಸೇರಿ ಒಟ್ಟು 195 ಕಾಸರೋಡು ಕುಬ್ಜ ತಳಿಗಳು ಇಲ್ಲಿವೆ. 3.5 ಎಕರೆ ವಿಸ್ತೀರ್ಣದ ಹಸುಗಳಿಗೆ ಮೇವಿನ ಫಾರ್ಮ್ ಕೂಡ ಇದೆ. ಇಲ್ಲಿ ಕುಬ್ಜ ಹಸುಗಳ ಸಗಣಿ ಮಾರಾಟಕ್ಕೆ ಲಭ್ಯವಿದೆ.
ಕೇಂದ್ರಕ್ಕೆ ಭೇಟಿ ನೀಡಿದ ಸಚಿವೆ ಮೆಚ್ಚುಗೆ ವ್ಯಕ್ತಪಡಿಸಿ ಕೇಂದ್ರದ ಅಭಿವೃದ್ದಿಗೆ ಅಗತ್ಯದ ನೆರವಿನ ಭರವಸೆ ನೀಡಿರುವರು.