ಕಾಸರಗೋಡು: ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಚೀಮೇನಿ ಎನರ್ಜಿ ಮ್ಯಾನೇಜ್‍ಮೆಂಟ್ ಸೆಂಟರ್, ಸೆಂಟರ್ ಫಾರ್ ಎನ್‍ವಯರ್ನ್‍ಮೆಂಟ್ ಏಂಡ್ ಡೆವೆಲಪ್‍ಮೆಂಟ್ ಸಹಕಾರ ಹಾಗೂ ತಾಯನ್ನೂರ್ ಯುವಶಕ್ತಿ ಸಾರ್ವಜನಿಕ ಗ್ರಂಥಾಲಯ ನೇತೃತ್ವದಲ್ಲಿ ಇಂಧನ ಉಳಿತಾಯದ ಬಗ್ಗೆ ರ್ಯಾಲಿ, ಪ್ರತಿಜ್ಞೆ ಮತ್ತು ಸಹಿ ಸಂಗ್ರಹ ಅಭಿಯಾನ ಚೀಮೇನಿ ನಗರದಲ್ಲಿ ಜರುಗಿತು.
ಕಯ್ಯೂರ್ ಚೀಮೇನಿ ಗ್ರಾಪಂ ಅಧ್ಯಕ್ಷ ಕೆ.ಪಿ ವಲ್ಸಲನ್ ಉದ್ಘಾಟಿಸಿದರು. ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ಎ,ಜಿ ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಯುವಶಕ್ತಿ ಸಾರ್ವಜನಿಕ ಗ್ರಂಥಾಲಯ ಯೂತ್ ಕೋರ್ಡಿನೇಟರ್ ಸ್ನೇಹಾವಿನೋದ್ ಪ್ರತಿಜ್ಞೆ ಬೋಧಿಸಿದರು. ಇಎಂಸಿ ಸಂಪನ್ಮೂಲ ವ್ಯಕ್ತಿ ಪಿ.ಡಿ ವಿನೋದ್, ಎನ್ನೆಸ್ಸೆಸ್ ಕೋರ್ಡಿನೇಟರ್ ಬಿನೇಶ್ಮೋಹನ್, ವ್ಯಾಪಾರಿ ಸಮಿತಿ ಚೀಮೇನಿ ಘಟಕ ಅಧ್ಯಕ್ಷ ನಾರಾಯಣನ್, ಗ್ರಂಥಾಲಯ ಸಮಿತಿ ಅಧ್ಯಕ್ಷ ಪಿ.ವಿ ಪುರುಷೋತ್ತಮನ್, ಕಾರ್ಯದರ್ಶಿ ಸಿ.ಟಿ ಪ್ರಶಾಂತ್, ಎನ್ನೆಸ್ಸೆಸ್ ವಾಲೆಂಟಿಯರ್ ಸೆಕ್ರೆಟರಿ ಶ್ರೀಲಕ್ಷ್ಮೀ ಉಪಸ್ಥೀತರಿದ್ದರು. ಈ ಸಂದರ್ಭ ಸಾರ್ವಜನಿಕರಿಗಾಗಿ ಇಂಧನ ಉಳಿತಾಯದ ಬಗ್ಗೆ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಎಲ್‍ಇಡಿ ಬಲ್ಬ್ ಬಹುಮಾನವಾಗಿ ನೀಡಲಾಯಿತು.